ಎಸ್ ಆರ್ ಎಚ್ ವಿರುದ್ಧ ಸಿಎಸ್ ಕೆಗೆ ಭರ್ಜರಿ ಗೆಲುವು

ನವದೆಹಲಿ, ಏ.28- ಚೆನ್ನೈ ಸೂಪರ್ ಕಿಂಗ್ ನ ಋತುರಾಜ್ ಗಾಯಕ್ ವಾಡ್ ಬಿರುಸಿನ 75 ಹಾಗೂ ಡುಪ್ಲೆಸಿಸ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಎಸ್ ಆರ್ ಎಚ್ ವಿರುದ್ಧ ಧೋನಿ‌ ಪಡೆ 7 ವಿಕೆಟ್ ಗಳ ಭರ್ಜರಿ ಜಯ ಗಳಿಸಿತು.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ನ 23 ನೇ ಪಂದ್ಯದಲ್ಲಿ ಸಿಎಸ್ ಕೆ ಜಯದ ಓಟವನ್ನು ಮುಂದುವರೆಸಿತು.


172 ರನ್ ಗಳ ಗೆಲುವಿನ ಬೆನ್ನಹತ್ತಿದ‌ ಸಿಎಸ್‌ಕೆ ಪರ ಗಾಯಕ್ ವಾಡ್ ಮತ್ತು ಡುಪ್ಲೆಸಿಸ್ ಮೊದಲ ವಿಕೆಟ್ ಗೆ 129 ರನ್ ಕಲೆಹಾಕಿ ಗೆಲುವಿಗೆ ಭದ್ರ ಬುನಾದಿ ಹಾಕಿದರು.
44 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ 75 ರನ್ ಬಾರಿಸಿ‌ ಗಾಯಕವಾಡ್ ಔಟಾದರು. ಬಳಿಕ ಡುಪ್ಲೆಸಿಸ್ 38 ಎಸೆತಗಳಲ್ಲಿ ‌ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿ ರಶೀದ್ ಖಾನ್ ಗೆ ವಿಕೆಟ್ ಒಪ್ಪಿಸಿದರು. ಮೊಯಿನ್ ಅಲಿ 15 ರನ್ ಗಳಿಸಿದರು.
ಬಳಿಕ ಜಡೇಜಾ ಹಾಗೂ ರೈನಾ 18.3 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 173 ರನ್ ಗಳಿಸುವ ಮೂಲಕ ತಂಡಕ್ಕೆ ಜಯ ತಂದು ಕೊಟ್ಡರು. ರೈನಾ 17 ಹಾಗೂ ಜಡೇಜಾ 7 ರನ್ ಗಳಿಸಿ ಅಜೇಯರಾಗುಳಿದರು.
ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು.
ವಾರ್ನರ್ ಮತ್ತು ಬೈರ್ ಸ್ಟೋ ಇನ್ನಿಂಗ್ಸ್ ಆರಂಭಿಸಿದರು.‌ಆದರೆ ಉತ್ತಮ ಮುನ್ನಡೆ ದೊರಕಿಸಿಕೊಡಲು ವಿಫಲರಾದರು. ‌ಬೈರ್ ಸ್ಟೋ 7 ರನ್ ಗಳಿಸಿ ನಿರ್ಗಮಿಸಿದರು.
ಬಳಿಕ‌‌ ಮನಿಶ್ ಪಾಂಡೆ ಮತ್ತು ವಾರ್ನರ್ ಜತೆಗೂಡಿ ಎರಡನೇ ವಿಕೆಟ್ ಗೆ ರನ್ ಕಲೆಹಾಕಿದ್ದರಿಂದ ತಂಡ ಸವಾಲಿ‌ನ ಮೊತ್ತ‌ ಗಳಿಸುವಲ್ಲಿ ಸಫಲವಾಯಿತು.
ಪಾಂಡೆ 46 ಎಸೆತಗಳಲ್ಲಿ 61 ರನ್ ಗಳಿಸಿದರೆ, ವಾರ್ನರ್ 57 ಬಾರಿಸಿದರು.
ವಿಲಿಯಮ್ಸ್ ನ್ 26 ಹಾಗೂ ಕೇದಾರ್ ಜಾದವ್ 12 ರನ್ ಗಳಿಸಿ ಔಟಾಗದೆ ಉಳಿದರು.