ಎಸ್ ಆರ್ ಎಚ್ ವಿರುದ್ದ ಕೆಕೆ ಆರ್ ಗೆ 10 ರನ್ ಗಳ ಗೆಲುವು

ಚನ್ನೈ, ಏ 11-ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ದ ಕೊಲ್ಕತ್ತ ನೈಟ್ ರೈಡರ್ಸ್ 10 ರನ್ ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ‌ ಐಪಿಎಲ್ ನಲ್ಲಿ ಶುಭಾರಂಭ ಮಾಡಿದೆ.


188 ರನ್ ಗಳ ಸವಾಲಿನ ಬೆನ್ನಹತ್ತಿದ ಎಸ್ ಆರ್ ಎಚ್ ಆರಂಭದಲ್ಲಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ವೃದ್ಧಿಮಾನ್ ಸಾಹ 7 ಹಾಗೂ ಡೇವಿಡ್ ವಾರ್ನರ್ 3 ರನ್ ಗಳಿಸಿ ನಿರ್ಗಮಿಸಿದರು.
ನಂತರ ಮನೀಶ್ ಪಾಂಡೆ ಜಾನಿ ಬೈರ್ ಸ್ಟೋ ಉತ್ತಮ ಜತೆಯಾಟದತ್ತ ಸಾಗಿತ್ತು.‌ಆದರೆ ಅರ್ಧ ಶತಕ ಬಾರಿಸಿ ಆಡುತ್ತಿದ್ದ ಬೈರ್ ಸ್ಟೋ ಕಮಿನ್ಸ್ ಬೌಲಿಂಗ್ ನಲ್ಲಿ ನಿರ್ಗಮಿಸಿದರು.
ನಬಿ 14 ರನ್‌‌ ಗಳಿಸಿದರು. ಮನೀಷ್ ಪಾಂಡೆ 61ರನ್ ಹಾಗೂ ಅಬ್ದುಲ್ ಸಮದ್ 19 ರನ್ ಗಳಿಸಿ ಅಜೇಯ ರಾಗುಳಿದರು. ಅಂತಿಮವಾಗಿ ಎಸ್ ಅರ್ ಎಚ್ ಐದು ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ ಸೋಲಿಗೆ ಶರಣಾಯಿತು.
ಪ ್ರಸಿದ್ಧ್ ಕೃಷ್ಣ ಎರಡು ಹಾಗೂ ಕಮಿನ್ಸ್ , ರಸೆಲ್, ಹಸನ್ ತಲಾ ಒಂದು ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತ ನೈಟ್‌ ರೈಡರ್ಸ್ 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 187 ರನ್ ಗಳ ಸವಾಲಿನ‌ ಮೊತ್ತ ದಾಖಲಿಸಿತು.
ನಿಶಾ ರಾಣಾ ಹಾಗೂ ಶುಭಮನ್‌ ಗಿಲ್ ತಂಡಕ್ಕೆ ಉತ್ತಮ ಮುನ್ನಡೆ ದೊರಕಿಸಿಕೊಟ್ಟರು. ಗಿಲ್ 15 ರನ್ ಗಳಿಸಿ ರಶೀದ್ ಖಾನ್ ಗೆ ವಿಕೆಟ್ ಒಪ್ಪಿಸಿದರು.
ಬಳಿಕ ತ್ರಿಪಾಠಿ ಹಾಗೂ ರಾಣಾ ಎರಡನೇ ವಿಕೆಟ್ ಗೆ 15.2 ಓವರ್ ಗಳ ವರೆಗೆ ಕೊಂಡೊಯ್ದರು.
ರಾಣಾ 56 ಎಸೆತಗಳಲ್ಲಿ 9 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಬಾರಿಸಿ 80 ರನ್ ಗಳಿಸಿದರೆ ತ್ರಿಪಾಠಿ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ ಎರಡು ಸಿಕ್ಸರ್ 53 ರನ್ ಬಾರಿಸಿದರು. ಕಾರ್ತಿಕ್ 22 ರನ್ ಗಳಿಸಿದರು.

ಸ್ಕೋರ್ ವಿವರ
ಕೆಕೆಆರ್ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 187
ಎಸ್ ಆರ್ ಎಚ್ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 177ರನ್