ಎಸ್ ಆರ್ ಎಚ್ ನಾಯಕ ವಾರ್ನರ್ ‌ಹಠಾತ್ ವಜಾ: ವಿಲಿಯಮ್ಸ್‌ನ್ ಗೆ ತಂಡದ ಸಾರಥ್ಯ

ನವದೆಹಲಿ, ಮೇ 1- ಹಠಾತ್ ವಿದ್ಯಮಾನವೊಂದರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಸ್ಥಾನದಿಂದ ಡೇವಿಡ್ ವಾರ್ನರ್ ಅವರನ್ನು ವಜಾ ಮಾಡಲಾಗಿದೆ.

ಟೂರ್ನಿಯಲ್ಲಿ ಎಸ್ ಆರ್ ಎಚ್ ಕಳಪೆ ಪ್ರದರ್ಶನ ನೀಡುತ್ತಿರುವ ಬೆನ್ನಲ್ಲೇ ಈ ಅಚ್ಚರಿಯ ಬೆಳವಣಿಗೆ ನಡೆದಿದ್ದು ನ್ಯೂಜಿಲೆಂಡ್ ನ ವಿಯಮ್ಸ್ ನ್ ಗೆ ತಂಡದ ನಾಯಕತ್ವ ನೀಡಲಾಗಿದೆ.

ಕೆಟ್ಟ ಪ್ತದರ್ಶನವೇ ವಾರ್ನರ್ ನಾಯಕತ್ವಕ್ಕೆ ಕುತ್ತು ಬಂದಿದೆ ಎಂದು ಹೇಳಲಾಗಿದೆ . ಆರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ದೆ. ಇದು‌ ಎಸ್ ಆರ್ ಎಚ್ ಫ್ರಾಂಚೈಸಿಯ ಆಕ್ರೋಶಕ್ಕೆ ಕಾರಣವಾಗಿದೆ.

ಇದರಿಂದಾಗಿ ನಾಳೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅವರನ್ನು ಕೈಬಿಡುವ ಸಾಧ್ಯತೆಯಿದೆ ದಟ್ಟವಾಗಿದೆ.

ಹೀಗಿದ್ದರೂ ಓರ್ವ ಆಟಗಾರನಾಗಿ ವಾರ್ನರ್ ಅತ್ಯುತ್ತಮ ಪ್ರದರ್ಶನ ನೀಡುವುದನ್ನು ಎದುರು ನೋಡುತ್ತಿರುವುದಾಗಿ ಸನ್‌ರೈಸರ್ಸ್ ಮಾಧ್ಯಮ‌ ಪ್ರಕಟಣೆಯಲ್ಲಿ ತಿಳಿಸಿದೆ.