ಎಸ್ ಆರ್ ಎಚ್ ಆಟಗಾರ ನಟರಾಜನ್ ಗೆ ಸೋಂಕು ದೃಢ;ಇಂದಿನ ಪಂದ್ಯ ರದ್ದಿಲ್ಲ

ದುಬೈ, ಸೆ.22- ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಟಿ.ನಟರಾಜನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆದರೆ ಇಂದು ನಿಗದಿಯಾಗಿರುವ ಎಸ್ ಆರ್ ಎಚ್ ಮತ್ತು‌‌ ಡೆಲ್ಲಿ ಕ್ಯಾಪಿಟಲ್ಸ್ ಇಂದಿನ ಪಂದ್ಯ ನಿಗದಿಯಂತೆ ನಡೆಯಲಿದೆ ಎಂದು ಬಿಸಿಸಿಐ ಸ್ಷಪ್ಟಪಡಿಸಿದೆ.
ಕೊರೊನಾ ಕಾಟದಿಂದಾಗಿ ಅರ್ಧಕ್ಕೆ ರದ್ದುಗೊಂಡಿದ್ದ ಐಪಿಎಲ್ ಪಂದ್ಯಗಳನ್ನು ದುಬೈಗೆ ಸ್ಥಳಾಂರಗೊಳಿಸಿ ಈ ತಿಂಗಳ 19ರಿಂದ ಬಾಕಿ ಉಳಿದ ಪಂದ್ಯಗಳು ಆರಂಭವಾಗಿರುವ ಬೆನ್ನಲ್ಲೇ ನಟರಾಜನ್ ಗೆ ಸೋಂಕು ಕಾಣಿಸಿಕೊಂಡಿರುವುದು ಭೀತಿಗೆ ಕಾರಣವಾಗಿದೆ.
ನಟರಾಜನ್ ಗೆ ಸೋಂಕು ತಗುಲಿದ್ದು ಅವರು ಪ್ರತ್ಯೇಕವಾಗಿರಲಿದ್ದಾರೆ. ಅವರಲ್ಲಿ ರೋಗ ಲಕ್ಷಣಗಳು ಕಂಡುಬಂದಿಲ್ಲ.
ಅವರ ನಿಕಟ ಸಂಪರ್ಕ ದಲ್ಕಿದ್ದ ಆರು ಮಂದಿಯನ್ನು ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿದೆ.
ತಂಡದ ಸಹ ಆಟಗಾರ ವಿಜಯ್ ಶಂಕರ್, ತಂಡದ ವ್ಯವಸ್ಥಾಪಕ ವಿಜಯ್ ಕುಮಾರ್, ಫಿಸಿಯೋಥೆರಪಿಸ್ಟ್ ಶ್ಯಾಮಸುಂದರ್, ಜೆ ವೈದ್ಯ ಅಂಜನಾ ವಣ್ಣನ್, ಲಾಜಿಸ್ಟಿಕ್ ಮ್ಯಾನೇಜರ್ ತುಷಾರ್ ಖಾಡೇಕರ್ ಹಾಗೂ ನೆಟ್ ಬೌಲರ್ ಪೆರಿಯಾಸಾಮಿ ಗಣೇಶನ್ ಪ್ರತ್ಯೇಕ ವಾಸದಲ್ಲಿದ್ದಾರೆ.
ತಂಡದ ಇತರ ಎಲ್ಲ ಆಟಗಾರರನ್ನು ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಫಲಿತಾಂಶ ನೆಗೆಟಿವ್ ಬಂದಿದೆ. ಹೀಗಾಗಿ ಇಂದಿನ ಪಂದ್ಯ ನಿಗದಿಯಂತೆ ನಡೆಯಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.