ಎಸ್‍ಯುಸಿಐ(ಸಿ) ಸಂಸ್ಥಾಪನಾ ದಿನಾಚರಣೆ

ಕಲಬುರಗಿ:ಏ.25: ಇಂದು ದೇಶದ ಪರಿಸ್ಥಿತಿ ತೀರ್ವವಾದ ಬಿಕ್ಕಟ್ಟಿನಲ್ಲಿದ್ದು ಹಸಿವು, ನಿರುದ್ಯೋಗ, ಬಡತನಗಳಿಂದ ಜನಸಾಮಾನ್ಯರ ಸ್ಥಿತಿ ಘೋರವಾಗುತ್ತಿದೆ ಎಂದು ಸೋಷಲಿಸ್ಟ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯೂನಿಷ್ಟ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾ.ಎಚ್.ವಿ.ದಿವಾಕರ ಅವರು ಹೇಳಿದರು.
ಅವರು ಶನಿವಾರ ಸಾಯಂಕಾಲ ನಡೆದ ಸೋಷಲಿಸ್ಟ ಯೂನಿಟಿ ಸೆಂಟರ್ ಆಫ್ ಇಂಡಿಯಾ(SUಅI) ಕಮ್ಯೂನಿಷ್ಟ ಪಕ್ಷದ 73 ನೆಯ ಸಂಸ್ಥಾಪನಾ ದಿನಾಚರಣೆಯ ಜಿಲ್ಲಾ ಮಟ್ಟದ ಆನ್ ಲೈನ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡುತ್ತಾ ಅವರು ಬ್ರಿಟೀಷರು ತೊಲಗಿದ ನಂತರ ಅಧಿಕಾರ ಬಂಡವಾಳಶಾಹಿಗಳ ಕೈಸೇರಿತು. ಅಧಿಕಾರಸ್ತರು ಬದಲಾದರು ಆದರೆ ಶೋಷಣೆ ನಿರಂತರಗೊಂಡಿತು. ಲಾಭವೇ ಈ ವ್ಯವಸ್ಥೆಯ ಮೂಲ ಮಂತ್ರವಾಗಿರುವದರಿಂದ ದುಡಿಯುವ ಜನರ ಬದುಕಿನಲ್ಲಿ ಯಾವ ಬದಲಾವಣೆಯೂ ಕಾಣಲಿಲ್ಲ. ಇದನ್ನು ಮನಗಂಡು ಮಹಾನ್ ಕಾರ್ಮಿಕ ವರ್ಗದ ನಾಯಕರಾದ ಕಾಮ್ರೆಡ್ ಶಿವದಾಸ್ ಘೋಷ್ ಅವರು ನೈಜವಾದ ಅಕೃತ್ರಿಮ ಕಮ್ಯೂನಿಷ್ಟ ಪಕ್ಷವನ್ನಾಗಿ SUಅI(ಅ) ಅನ್ನು ಈ ನೆಲದಲ್ಲಿ ಸ್ಥಾಪಿಸಿದರು. ಇಂದು ಕಾರ್ಮಿಕ ವರ್ಗದ ವಿಮೋಚನೆಗೆ SUಅI(ಅ) ಯನ್ನು ಬಲಪಡಿಸುವದನ್ನು ಬಿಟ್ಟು ಇನ್ನಾವ ದಾರಿಯೂ ಇಲ್ಲ ಎಂದರು. ದೇಶವನ್ನು ದೀರ್ಘಕಾಲ ಆಳಿದ ಕಾಂಗ್ರೆಸ್ ಪಕ್ಷವು ಸಹ ರೈತ-ಕಾರ್ಮಿಕ ವಿರೋಧಿ ಬಂಡವಾಳಶಾಹಿಗಳ ಪರವಾದ ನೀತಿಗಳನ್ನು ನಿರಂತರವಾಗಿ ಜಾರಿಗೆ ತಂದಿತ್ತು. ತಾವು ಈ ಪಕ್ಷಕ್ಕಿಂತ ತುಂಬಾ ಭಿನ್ನ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷವು ಬಂಡವಾಳಗಾರರ ಸೇವೆಯನ್ನು ಇನ್ನೂ ಅತ್ಯಂತ ನಿಷ್ಟೆಯಿಂದ ಪಾಲಿಸುತ್ತಾ ಫ್ಯಾಸೀವಾದಿ ನೀತಿಗಳನ್ನು ಜಾರಿಗೆ ತಂದು ದುಡಿಯುವ ಜನರ ಮೇಲಿನ ಶೋಷಣೆಯನ್ನು ಅತ್ಯುಗ್ರಗೊಳಿಸಿದೆ. ಜಾತಿ,ಕೋಮುವಿನ ಹೆಸರಲ್ಲಿ ಜನರ ಭಾವೈಕ್ಯತೆಯನ್ನು ಛಿದ್ರಗೊಳಿಸಲಾಗುತ್ತಿದೆ.
ಖಾಸಗೀಕರಣ ನೀತಿಗಳನ್ನು ತೀರ್ವಗೊಳಿಸಿದ ಸರಕಾರ ಬ್ಯಾಂಕ್, ರೈಲ್ವೇ, ವಿಮಾನ, ವಿಮಾ ಕ್ಷೇತ್ರಗಳಂತಹ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ತನಗೆ ಬೇಕಾದ ಬಂಡವಾಗಾರರಿಗೆ ಅಲ್ಪ ಹಣಕ್ಕೆ ಮಾರಿಕೊಳ್ಳಲಾಗುತ್ತಿದೆ.
ಇನ್ನೊಂದೆಡೆ ಚುನಾವಣಾ ರಾಜಕೀಯದಲ್ಲಿ ನಿರತವಾಗಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ನಿರ್ಲಕ್ಷತನವನ್ನು ತೋರಿವೆ. ಕನಿಷ್ಟ ವೈದ್ಯಕೀಯ ಸೌಲಬ್ಯಗಳನ್ನು ಒದಗಿಸದ ಇಂತಹ ಸರಕಾರಗಳ ವಿರುದ್ಧ ಯುವಜನರು ದ್ವನಿಯೆತ್ತಬೇಕಾಗಿದೆ. ಲಕ್ಷಾಂತರ ರೈತರು ಕೇಂದ್ರ ಸರಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದರೂ ಅವರ ಧ್ವನಿಗೆ ಸ್ಪಂದಿಸದೆ, ದಬ್ಬಾಳಿಕೆಯಿಂದ ಪ್ರಜಾತಂತ್ರ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ.
ಇದೆಲ್ಲದರ ಬದಲಾವಣೆಗೆ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯೊಂದೇ ಅಂತಿಮ ಪರಿಹಾರವಾಗಿದ್ದು, ಜನತೆ SUಅI(ಅ) ಯನ್ನು ಬಲಪಡಿಸಿ ಈ ನೆಲದಲ್ಲಿ ಹೊಸ ಇತಿಹಾಸವನ್ನು ಬರೆಯಬೇಕೆಂದು ಕರೆ ನೀಡಿದರು.
SUಅI(ಅ) ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಕಾ. ವೀರಭದ್ರಪ್ಪ.ಆರ.ಕೆ. ಅವರು ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದರು. ಪಕ್ಷದ ಸದಸ್ಯರಾದ ಕಾ. ಶಿಲ್ಪಾ ಬಿ.ಕೆ. ಅವರು ಕ್ರಾಂತಿಗೀತೆ ಹಾಡಿದರು.