ಎಸ್‍ಬಿಆರ್ ಕಾಲೇಜಿನಲ್ಲಿ ಶ್ರದ್ಧಾಂಜಲಿ

ಕಲಬುರಗಿ ಏ 18: ನಗರದ ಎಸ್‍ಬಿಆರ್ ಕಾಲೇಜಿನಲ್ಲಿ ಪೂಜ್ಯ ಬಸವರಾಜಪ್ಪ ಅಪ್ಪಾ ಅವರ ಧರ್ಮಪತ್ನಿ ಲಿಂಗೈಕ್ಯ ಮಾತೋಶ್ರೀ ನಳಿನಿ ಅವ್ವಾಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಭೆ ಏರ್ಪಡಿಸಲಾಯಿತು.
ಕಾಲೇಜಿನ ಮೇಲ್ವಿಚಾರಕ ಡಾ.ಶ್ರೀಶೈಲ ಹೊಗಾಡೆ ನೇತೃತ್ವದಲ್ಲಿ ಎಲ್ಲ ವಿಭಾಗಗಳ ಮುಖ್ಯಸ್ಥರು ,ಬೋಧಕ,ಬೋಧಕೇತರ ಸಿಬ್ಬಂದಿ ವರ್ಗದವರು ಸೇರಿ ಲಿಂಗೈಕ್ಯ ಮಾತೋಶ್ರೀ ನಳಿನಿ ಅವ್ವಾಜಿ ಅವರ ಭಾವಚಿತ್ರಕ್ಕೆ ಪುಷ್ಪಗುಚ್ಛ ಸಮರ್ಪಿಸಿ ,ಎರಡು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.