ಎಸ್‍ಪಿಯಿಂದ ಜನತಾ ಕಫ್ರ್ಯೂ ವೀಕ್ಷಣೆ

ಮುದ್ದೇಬಿಹಾಳ;ಮೇ.5: ಮುದ್ದೇಬಿಹಾಳ ಪಟ್ಟಣಕ್ಕೆ ಮಂಗಳವಾರ ವಿಜಯಪುರ ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್ ಬೇಟಿ ನೀಡಿ ನಗರದ ಪ್ರಮುಖ ವೃತ್ತಗಳಲ್ಲಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಜನತಾ ಕಪೆÇ್ರ್ಯೀ ವೀಕ್ಷಣೆ ಮಾಡಿದರು

ಬಳಿಕ ಸುದ್ದಿಗಾರರೊಂದಿಗೆÉ ಮಾತನಾಡಿದ ಅವರು ಕಳೆದ ವರ್ಷದ ಲಾಕ್ಡೌನ್‍ಗೂ ಮತ್ತು ಈ ಬಾರಿಯ ಜನತಾ ಕಪೆÇ್ರ್ಯೀಗೂ ತುಂಬಾ ವತ್ಯಾಸವಿದೆ ಜನರು ಸಾಮಾಜಿಕ ಅಂತರ ಕುರಿತು ಅರ್ಥ ಮಾಡಿಕೊಂಡು ಮುಂಜಾಗ್ರತಾ ವಹಿಸಿದ್ದಾರೆ ಆದರೆ ಈ ಬಾರಿಯ ಸಮಸ್ಯೆ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೆ ಇರವುದು ಆಕ್ಸಿಜನ್ ಮುಂತಾದ ಸಮಸ್ಯೆಗಳು ಇವೆ,ನಾವು ತಾಲೂಕು ಸರಕಾರಿ ಆಸ್ಪತ್ರೆಗೆ ಪೂಲೀಸ್ ಸಿಬ್ಬಂದಿ ನಿಯೋಜನೆ ಮಾಡಿ ಬಂದೂಬಸ್ತ ಮಾಡುವ ಕಾರ್ಯ ಮಾಡ್ತಾ ಇದ್ದೇವೆ,ಚಾಮರಾಜನಗರ ಹಾಗೂ ಅಪ್ಜಲ್ಪುರ್ ಗಳಲ್ಲಿ ಉಂಟಾದ ಸಮಸ್ಯೆ ನಮ್ಮಲ್ಲಿ ಆಗಬಾರದು ಅದಕ್ಕೆ ಮುಂಜಾಗ್ರತಾ ಕ್ರಮಕ್ಕೆ ನಿರ್ದೇಶನ ಮಾಡಿದ್ದೇವೆ ಸ್ಥಳೀಯ ಆಸ್ಪತ್ರೆಯ ಸಮಸ್ಯೆಗಳ ಕುರಿತು ಜಿಲ್ಲಾಡಳಿತ ಕ್ಕೆ ತಿಳಿಸುತ್ತವೆ ಎಂದರು.

ಆಸ್ಪತ್ರೆಗಳಗೆ ನಮ್ಮ ಸಿಬ್ಬಂದಿ ಹಗಲು ರಾತ್ರಿ ಭದ್ರತೆ ನೀಡುವುದು,ಪೂಲೀಸ್ ಸಿಬ್ಬಂದಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಬೇಕು,ಆಸ್ಪತ್ರೆ ಸಮಸ್ಯೆ ಯನ್ನು ನೋಡಲ್ ಅಧಿಕಾರಿ ಸಂಗ್ರಹಿಸಿ ನಮಗೆ ಮಾಹಿತಿ ಒದಗಿಸಿದರೆ ನಾವು ಜಿಲ್ಲಾಡಳಿತಕ್ಕೆ ತಿಳಿಸುತ್ತೇವೆ ಮತ್ತು ಪೂಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವವರ ಆರೋಗ್ಯ ಕುರಿತು ಭದ್ರತೆ ಕೈಗೊಳ್ಳಲಾಗುವುದು ,ಮತ್ತು ನಮ್ಮ ಸಿಬ್ಬಂದಿ ಯಾರೆಲ್ಲ ಲಸಿಕೆ ಮಾಡಿಸಿಕೂಂಡಿಲ್ಲ ಮತ್ತು ಅವರ ಕುಟಂಬಸ್ಥರು ತಾಯಿ ತಂದೆ ಕೋವಿಡ್ ಲಸಿಕೆಯನ್ನು ಹಾಕಿಸಿಕೂಳ್ಳಬೇಕು, ಸಿಬ್ಬಂದಿಗಳ ಹೆತ್ತ ತಂದೆತಾಯಿಗಳ ಆರೋಗ್ಯ ಸರಿಯಿಲ್ಲವೆಂದರೆ ಸರಿಯಾಗಿ ಕರ್ತವ್ಯ ನಿರ್ವಹಿಸಲು ಆಗುವುದಿಲ್ಲ ಹೀಗಾಗಿ ಪೂಲೀಸ್ ಸಿಬ್ಬಂದಿಗಳ ಕುಟುಂಬಸ್ಥರು ಲಸಿಕೆ ಹಾಕಿಸಿಕೂಳ್ಳಬೇಕು ಎಂದರು ಈ ಸಂದರ್ಭದಲ್ಲಿ ಡಿವಾಯೈಎಸ್ಪಿ ಅರುಣಕುಮಾರ ಕೋಳೂರ, ಸಿಪಿಐ ಆನಂದ ವಾಗ್ಮೋಡೆ ,ಪಿಎಸೈ ಎಂ.ಬಿ ಬಿರಾದಾರ ಉಪಸ್ಥಿತರಿದ್ದರು