ಎಸ್‍ಪಿಬಿ, ಲಕ್ಷ್ಮೀ ಅಭಿನಯದ ‘ಮಿಥುನಂ’ ಕನ್ನಡಕ್ಕೆ! ಮುಂದಿನ ತಿಂಗಳು ಬಿಡುಗಡೆ

ಬೆಂಗಳೂರು, ಮ 02 -ಸಂಗೀತ ಪ್ರೇಮಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿರುವ ಗಾನ ಗಾರುಡಿಗ ದಿವಂಗತ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಗೂ ಪಂಚ ಭಾಷಾ ತಾರೆ ಲಕ್ಷ್ಮೀ ಅಭಿನಯದ ತೆಲುಗಿನ ಸೂಪರ್ ಹಿಟ್ ಚಿತ್ರ ‘ಮಿಥುನಂ’.‌
ಆನಂದ್ ಮುಯಿದ ರಾವು ನಿರ್ಮಿಸಿ, ತನಿಕೆಳ್ಳ ಭರಣಿ ನಿರ್ದೇಶಿಸಿದ್ದ ಈ ಚಿತ್ರ ಕನ್ನಡಕ್ಕೆ ಡಬ್ಬ್ ಆಗುತ್ತಿದೆ.
ಸೌಂಡ್ ಆಫ್ ಮ್ಯೂಸಿಕ್ ಗುರುರಾಜ್ ಅವರ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ.
ಕನ್ನಡದಲ್ಲೂ ‌ಆನಂದ ಮುಯಿದ ರಾವು ಅವರೆ ನಿರ್ಮಿಸುತ್ತಿದ್ದು, ಮಧುಸೂದನ್ ಹವಾಲ್ದಾರ್ ನೇತೃತ್ವವಿದೆ. ಕನ್ನಡದಲ್ಲಿ ‘ಮಿಥುನ’ ಹೆಸರಿನಲ್ಲಿ ಬರಲಿರುವ ಚಿತ್ರಕ್ಕೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಮತ್ತು ಸಂಭಾಷಣೆ ಬರೆದಿದ್ದು,
ಡಿಸೆಂಬರ್ ನಲ್ಲಿ ರಾಜ್ಯದ ‌ಚಿತ್ರಮಂದಿರಗಳಲ್ಲಿ‌ ಬಿಡುಗಡೆಯಾಗಲಿದೆ.
ಎಸ್ ಪಿ ಬಿ ಸುಮಾರು 70ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 2012ರಲ್ಲಿ ರಿಲೀಸ್ ಆಗಿದ್ದ ಮಿಥುನಂ ಸಿನಿಮಾದಲ್ಲಿ ಎಸ್ ಪಿ ಬಿ ಮತ್ತು ನಟಿ ಲಕ್ಷ್ಮೀ ಪ್ರಮುಖ ಪಾತ್ರದಲ್ಲಿ ನಟಿದ್ದಾರೆ