ಎಸ್‍ಡಿಎಮ್‍ವಿವಿ ವರ್ಷಾಚರಣೆ ಕಾರ್ಯಕ್ರಮ

ಹುಬ್ಬಳ್ಳಿ,ಡಿ 20: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಎರಡನೇಯ ವರ್ಷಾಚರಣೆಯು ಇಶ್ಯಾವಾಸ್ಯಂ ಸಭಾಂಗಣದಲ್ಲಿ ಜರುಗಿತು. ಎರಡನೇಯ ವರ್ಷಾಚರಣೆಯ ಕಾರ್ಯಕ್ರಮವನ್ನು ಧರ್ಮಸ್ಥಳದಿಂದ ಶ್ರೀಮತಿ ಹೇಮಾವತಿ ಹೆಗ್ಗಡೆ ಮತ್ತು ಪೂಜ್ಯ ಶ್ರೀ. ಡಿ.ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಎಸ್.ಡಿ.ಎಂ. ಕ್ಯಾಂಪಸ್‍ನಲ್ಲಿ ನಡೆದ ಕಾರ್ಯಕ್ರಮವನ್ನು ಉಪಕುಲಪತಿಗಳಾದ ಡಾ.ನಿರಂಜನಕುಮಾರ, ಶ್ರೀಮತಿ ಪದ್ಮಲತಾ ನಿರಂಜನ, ಉಪಕುಲಪತಿಯವರಾದ ಡಾ.ಎಸ್.ಕೆ.ಜೋಶಿ ಹಾಗೂ ಶ್ರೀ ಜೀವಂಧರಕುಮಾರ, ಕುಲಸಚಿವರಾದ ಡಾ. ಯು.ಎಸ್.ದಿನೇಶ ಅವರು ದೀಪ ಬೆಳಗಿಸಿ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಎರಡನೇಯ ವರ್ಷಾಚರಣೆಯ ಸವಿ ನೆನಪಿಗಾಗಿ ಕೇಕನ್ನು ಕತ್ತರಿಸಲಾಯಿತು.
ಅನಂತ ಆಚಾರ್ಯ ಭಗವಂತನನ್ನು ಪ್ರಾರ್ಥಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಕುಲಸಚಿವರಾದ ಲೆಪ್ಟಿನಂಟ್ ಕರ್ನಲ್ (ರಿಟೈರ್ಡ) ಯು.ಎಸ್.ದಿನೇಶ ಅವರು ಸಭಿಕರನ್ನು ಸ್ವಾಗತಿಸಿ ವಾರ್ಷಿಕ ವರದಿಯನ್ನು ಒಪ್ಪಿಸಿದರು.
ಉಪಕುಲಪತಿಗಳಾದ ಡಾ. ನಿರಂಜನಕುಮಾರ ಅವರು ಮಾತನಾಡಿ ಕುಲಪತಿಗಳಿಂದ ದೊರೆತ ನಿರಂತರ ಪ್ರೋತ್ಸಾಹ ಮತ್ತು ಧಾರವಾಡದ ಎಸ್.ಡಿ.ಎಂ. ಕುಟುಂಬದವರಿಂದ ದೊರೆತ ಪರಿಶ್ರಮಕ್ಕೆ ನಮ್ಮ ವಿಶ್ವವಿದ್ಯಾಲಯಕ್ಕೆ ಕೇವಲ ಎರಡೇ ವರ್ಷಗಳಲ್ಲಿ ಅತ್ಯುನ್ನತ ಶ್ರೇಣಿಯನ್ನು ಸಾಧಿಸಲು ಸಾದ್ಯವಾಯಿತು. ನಮ್ಮ ವಿಶ್ವವಿದ್ಯಾಲಯವು ಉತ್ತಮ ಗುಣವiಟ್ಟದ ಶಿಕ್ಷಣವನ್ನು ಕೊಡುವುದು ಮತ್ತು ಉತ್ತಮ ಮಟ್ಟದ ವೈದ್ಯರನ್ನು ಸಮಾಜಕ್ಕೆ ಕೊಡುವುದೇ ನಮ್ಮ ಗುರಿ ಎಂದರು.

ಎರಡನೇಯ ವರ್ಷಾಚರಣೆಯ ಅಂಗವಾಗಿ ಹೊರಡಿಸಿದ ವಾರ್ಷಿಕ ಸಂಚಿಕೆಯನ್ನು ಹೇಮಾವತಿ ಹೆಗ್ಗಡೆ ಮತ್ತು ಪೂಜ್ಯ ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ತಮ್ಮ ಆಶೀರ್ವಚನ ಭಾಷಣದಲ್ಲಿ “ಸಣ್ಣ ಪ್ರಮಾಣದ ಆರಂಭದಿಂದ ನಾಳೆಗೆ ದೊಡ್ಡ ಹೆಸರು ಮತ್ತು ಗುರಿಯನ್ನು ಹೊಂದಬಹುದು” ಎಸ್.ಡಿ.ಎಂ ಕುಟುಂಬದ ಸಕಲ ನೌಕರರ ಪರಿಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಒಳ್ಳೆಯ ಮನಸ್ಸಿನಿಂದ ಮಾಡಿದ ಸಣ್ಣ ಕೆಲಸವು ಮತ್ತು ಪ್ರತಿಯೊಬ್ಬರ ತ್ಯಾಗವು ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಪವಿತ್ರವೆಂದಿನಿಸುತ್ತದೆ ಎಂದು ಆಶೀರ್ವÀದಿಸಿದರು.
ವಿಶ್ವವಿದ್ಯಾಲಯದ ವೀಡಿಯೋವನ್ನು ಉಪಕುಲಪತಿಗಳು ಬಿಡುಗಡೆಗೊಳಿಸಿ ಪ್ರದರ್ಶಿಸಲಾಯಿತು. ಎರಡನೇಯ ವರ್ಷಾಚರಣೆಯ ಅಂಗವಾಗಿ ಡಾ.ವಿ.ರವಿ, ವೈರಾಲಜಿ ತಜ್ಞ, ನಿಮಾನ್ಸ್ ಬೆಂಗಳೂರು ಅವರಿಂದ “ವೈರಸ್‍ಗಳ ಜೊತೆಯಲ್ಲಿ ಜೀವನ” ಎಂಬ ವಿಷಯದ ಮೇಲೆ ತಜ್ಞರ ಭಾಷಣವನ್ನು ಏರ್ಪಡಿಸಲಾಯಿತು.
ಡಾ. ರತ್ನಮಾಲಾ ಎಂ. ದೇಸಾಯಿ ವಂದನಾರ್ಪಣೆ ಸಲ್ಲಿಸಿದರು ಹಾಗೂ ಡಾ. ಬಲರಾಮ ಡಿ.ನಾಯ್ಕ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.