ಎಸ್‍ಟಿ ಪಟ್ಟಿಗೆ ಕೋಲಿ ಸಮಾಜ: ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಸಂಸದ ಡಾ.ಜಾಧವ

ಚಿಂಚೋಳಿ,ಮಾ.20- ಕೋಲಿ ಸಮಾಜವನ್ನು ಎಸ್‍ಟಿ ಪಟ್ಟಿಗೆ ಸೇರಿಸಲು ಲೋಕ ಸಭೆಯ ಅಧಿವೇಶನದಲ್ಲಿ ಸತತ ಎರನಡೆಬಾರಿ ಈ ವಿಷಯ ಪ್ರಸ್ಥಾಪಿಸುವ ಮೂಲಕ ಕೇಂದ್ರದ ಮೇಲೆ ಒತ್ತಡ ಹಾಕೂತ್ತಿರುವ ಸಂಸದ ಡಾ. ಉಮೇಶ ಜಾದವರ ಅವರಿಗೆ ಕೋಲಿ ಸಮಾಜದ ರಾಜ್ಯ ಸಹ ಕಾರ್ಯದರ್ಶಿ ಲಕ್ಷ್ಮಣ ಆವುಂಟಿ ಅವರು ಅಭಿನಂದಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು, ಹಿಂದುಳಿದ ಪುನಃ ಮತ್ತೆ ಸಂಸತ್ತು ಅಧಿವೇಶನದಲ್ಲಿ ಕೋಲಿ ಸಮಾಜದ ಪರವಾಗಿ ಸದಾ ದ್ವನಿಯತ್ತುತ್ತಿರುವ ಡಾ.ಉಮೇಶ ಜಾಧವ ಅವರು, ಸಮಾಜದ ಮೇಳಿನ ಕಾಳಜಿ ಎದ್ದು ತೋರಿಸುತ್ತದೆ ಎಂದರು.
ಈ ಮೊದಲು ಸಂಸತ್ ಅದಿವೇಶನದಲ್ಲಿ ಚುಕ್ಕಿ ಪ್ರಶ್ನೆಗೆ ಮತ್ತು ಶುನ್ಯ ಸಮಯದ ವೆಳೆಯಲ್ಲಿ ಈ ವಿಷಯ ಮಂಡಿಸಿದ್ದಾರೆ ಅಲ್ಲದೆ ಮಾಜಿ ಸಚಿವ ಬಾಬುರಾವ ಚುಂಚನಸೂರ ಅವರೊಂದಿಗೆ ಹಾಗೂ ಸಮಾಜದ ಮುಖಂಡರೊಂದಿಗೆ ವಿವರವಾಗಿ ಚರ್ಚಿಸಿ ಇವತ್ತು ಮತ್ತೆ ಅದಿವೇಷನದಲ್ಲಿ ಸಂಸದರು, ಕರ್ನಾಟಕದಲ್ಲಿರುವ ಕೋಲಿ ಹಾಗೂ ಕುರುಬ ಸಮುದಾಯವನ್ನು ಕೂಡಲೆ ಎಸ್ ಟಿ ಪಟ್ಟಿಗೆ ಸೆರಿಸಲು ವಿಷಯ ಮಂಡಿಸಿರುವದಕ್ಕೆ ಕೋಲಿ ಸಮಾಜದ ಬಂದುಗಳ ಒರವಾಗಿ ತುಂಬ ಅಭಿನಂದನೆಗಳು.
ಈ ಹಿಂದೆ ಮಾತು ಕೊಟ್ಟಂತೆ ಡಾ:ಉಮೇಶ ಜಾದವರವರು .ಕೋಲಿ ಸಮಾಜದ ಬಹುದಿನ ಬೆಡಿಕೆ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅಬಿವ್ರದ್ದಿ ನಿಗಮ ಸ್ಥಾಪಿಸಲು ಕಾರಣಿಭೂತರಾಗಿದ್ದರು ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಕೋಲಿ ಸಮೂಹಕ್ಕೆ ಖಂಡಿತಾ ನ್ಯಾಯ ವದಗಿಸುತ್ತಾರೆಂಬ ನಂಬುಗೆ ತಮಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ. ಕೋಲಿ ಸಮಾಜ ಮುಖಂಡರಾದ ಶಿವಶರಣಪ್ಪ ಗುತ್ತೆದಾರ, ರಾಜಕುಮಾರ ರಾಜಾಪೂರ , ಕಾಳಗಿ ,ಹಣಮಂತರಾವ ರಾಜಗಿರಿ ತಾ ಪಂ ಸದಸ್ಯರು, ರವಿಕಾಂತ ಹುಸೆಬಾಯಿ ಕಾಶಿನಾಥ ನಾಟಿಕಾರ ಜಗನ್ನಾಥ ತೇಲಿ ,ಬಸವರಾಜ ಬೇಸ್ತ ಶರಣು ನಾಟಿಕಾರ, ಗುಂಡು ಅವರಾದಿ, ಅಬಿಶೇಕ ಪಟರೆಡ್ಡಿ ,ಮಲ್ಲು ಮರಗುತ್ತಿ. ಶಿವಕುಮಾರ ಕಮನೂರ ಜಗನ್ನಾಥ ಕೋಡ್ಲಿ ಪ್ರವಿಣ ಪಟರೆಡ್ಡಿ. ಅರವಿಂದ ಕೊಳ್ಳರ್. ಪವನ ಚಂದಾಪೂರ ಸೇರಿದಂತೆ ಹಲವರಿದ್ದರು.