ಎಸ್‍ಜಿಟಿ ಕಾಲೇಜಿನ 17 ವಿಧ್ಯಾರ್ಥಿಗಳಿಗೆ ಱ್ಯಾಂಕ್

ಬಳ್ಳಾರಿ, ಜ.01: ನಗರದ ಶ್ರೀ.ಗುರು ತಿಪ್ಪೇರುದ್ರ ಮಹಾವಿದ್ಯಾಲಯದ 17 ವಿಧ್ಯಾರ್ಥಿಗಳು ವಿ.ಎಸ್.ಕೆ.ವಿ.ವಿ.ಯ ಱ್ಯಾಂಕ್ ವಿಜೇತರಾಗಿದ್ದು ಅದರಲ್ಲಿ ಬಂಗಾರ ಪದಕ ಪಡೆದ ಮೂವರು ವಿಧ್ಯಾರ್ಥಿಗಳಾದ ಕವಿತಾ ಎಸ್ ಬಿ,ಕಾಂ ನಲ್ಲಿ, ಅಂಜುಮ್ ನುಸ್ರತ್ ಬಿಸಿಎದಲ್ಲಿ, ಮತ್ತು ಸಾಯಿ ಪಲ್ಲವಿ ಜಿ ಪಿ.ಜಿ.ಡಿ,ಟಿ.ಯಂನಲ್ಲಿ ವಿ.ವಿ. ಘಟಿಕೋತ್ಸವದಲ್ಲಿ ಪದವಿಪತ್ರವನ್ನು ಸ್ವೀಕರಿಸಿದರು ಹಾಗೂ ಈ ಕಾಲೇಜಿನ ಪ್ರಥಮ ಬ್ಯಾಚ್‌ ಬಿ ಕಾಂ ವಿದ್ಯಾರ್ಥಿ ಜ್ಯೋತಿರ್‌ ಲಿಂಗ ಇವರು ಪಿ.ಹೆಚ್.ಡಿ ಪದವಿಯನ್ನು ಪಡೆದರು.
ಱ್ಯಾಂಕ್ ವಿಜೇತರಿಗೆ ತಿಪ್ಪೇರುದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್. ಎನ್. ರುದ್ರಪ್ಪ , ಕಾರ್ಯದರ್ಶಿಗಳಾದ ಜಿ. ನಾಗರಾಜ, ಪಿ ಯು ಪ್ರಾಂಶುಪಾಲರಾದ ಜಿ.ತಿಪ್ಪೇರುದ್ರ, ಪ್ರಾಧ್ಯಾಪಕರುಗಳು ಮತ್ತು ಹೆಚ್.ಓ.ಡಿ ಗಳಾದ ಹೆಚ್.ಆರ್ ಬಾಲನಾಗರಾಜ, ಇಷ೯ದ್, ರೂಪ, ರೀನಾ, ಡಾ. ಸುರೇಂದ್ರ ಬಾಬು, ಡಾ.ಪ್ರಕಾಶ್, ಡಾ.ನಾಗರಾಜ್, ಸಾವಿತ್ರಿ, ಮೈಕಲ್ ಡ್ಯಾನಿಯಲ್ ಮುಂತಾದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.