ಎಸ್‍ಕೆಎನ್‍ಜಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕಲರವ

ಗಂಗಾವತಿ ನ.18: ಏಳು ತಿಂಗಳ ಕೊರೋನ್ ರಜೆ ಬಳಿಕ ನಗರದ ಎಸ್‍ಕೆಎನ್‍ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಬೆಳಗ್ಗೆ ವಿದ್ಯಾರ್ಥಿಗಳ ಕಲರವ ಕಂಡುಬತ್ತು.
ಮೊದಲ ದಿನವೇ 10 ವಿದ್ಯಾರ್ಥಿಗಳು ಆಗಮಿಸಿದ್ದು ವಿಶೇಷವಾಗಿತ್ತು.
ಕಾಲೇಜುಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಆತ್ಮೀಯವಾಗಿ ಸ್ವಾಗತಿಸಿ, ಕಾಲೇಜುಗೆ ಬರುಮಾಡಿಕೊಂಡರು.
ಬಳಿಕ ಸಂಜೆವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಹೆಬ್ಬಸೂರು, ಯುಜಿಸಿ ಮಾರ್ಗಸೂಚಿ ಹಾಗೂ ಆರೋಗ್ಯ ಇಲಾಖೆಯ ನಿಯಮದಂತೆ ಮುನ್ನಚ್ಚರಿಕೆ ಕ್ರಮಕೈಗೊಂಡು ಮಂಗಳವಾರದಿಂದ ಕಾಲೇಜು ಪುನಾರಂಭಿಸಲಾಗಿದೆ ಎಂದರು.
ಕಾಲೇಜಿನ ಎಲ್ಲ ತರಗತಿ ಕೊಠಡಿಗಳನ್ನು ಸಂಪೂರ್ಣ ಸ್ಯಾನಿಟೈಸ್‍ರ ಮಾಡಲಾಗಿದೆ. ಪ್ರವೇಶದ ಬಾಗಿಲುನಲ್ಲಿಯೇ ಸ್ಯಾನಿಟೈಸರ ಹಾಗೂ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ವಿದ್ಯಾರ್ಥಿಗಳ ಆರೋಗ್ಯ ಇತ್ತ ದೃಷ್ಟಿಯಿಂದ 15 ಜನ ಒಳಗೊಂಡ ಒಂದು ತಂಡ ರಚಿಸಿದ್ದು, ಯಾವುದೇ ವಿದ್ಯಾರ್ಥಿಗಳಲ್ಲಿ ಕೆಮ್ಮು,ಜ್ವರ, ಶೀತ ಸೇರಿ ವಿವಿಧ ರೋಗದ ಲಕ್ಷಣವಿದ್ದರೆ ವೈದ್ಯರ ಬಳಿ ತಪಾಸಣೆಗೆ ಸೂಚಿಸಲಾಗುತ್ತಿದೆ. ಪ್ರತಿ ಬೇಂಚ್ ನಡುವೆ 6 ಅಡಿ ಅಂತರದಲ್ಲಿ ಮಾರ್ಕ ಮಾಡಲಾಗಿದ್ದು, ಕಾಲೇಜುಗೆ ಬರುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ತರವುದು ಕಡ್ಡಾಯ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಹೆಬ್ಬಸೂರು, ಡಾ.ಅಬ್ದುಲ್ ರೆಹಿಮಾನ, ಡಾ. ವಗ್ಗಿ, ಡಾ.ಮಮತ್ತಾ ಬೇಗಂ, ಪ್ರೊ.ಕರಿಗೂಳಿ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.