ಎಸ್‌ಸಿಪಿ ಟಿಎಸ್‌ಪಿ ಅನುದಾನ ದುರ್ಬಳಕೆ : ಕ್ರಮಕ್ಕೆ ಆಗ್ರಹ

ಲಿಂಗಸುಗೂರು.ಜೂ.೦೩-ಲಿಂಗಸುಗೂರು ತಾಲೂಕಿನ ಸಮಾಜ ಕಲ್ಯಾಣ ಇಲಾಖೆಗೆ ಹಾಗೂ ಪರಿಶಿಷ್ಟ ಪಂಗಡದ ವರ್ಗದ ಕಾಮಗಾರಿಗೆ ಬಂದ ಅನುದಾನ ಎಸ್‌ಸಿಪಿ ಟಿಎಸ್‌ಪಿ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಾಹಾಯಕ ಆಯುಕ್ತರ ಕಚೇರಿ ತಹಶೀಲ್ದಾರ್ ಶಾಲಂ ಸಾಬ್ ಇವರಿಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಕೋವಿಡ್ ಮಹಾಮಾರಿ ತಡೆಗಟ್ಟಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಮತ್ತು ರಾಜ್ಯದಲ್ಲಿ
ದಿನ ನಿತ್ಯ ದಲಿತರ ಮೇಲೆ ನಿರಂತರ ದಬ್ಬಾಳಿಕೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಹೀಗಾಗಿ ಸಮಾಜ ಕಲ್ಯಾಣ ಸಚಿವ ರಾಮುಲು ಅವರು ದಲಿತರ ಮೇಲೆ ನಡೆಯುತ್ತಿರುವ ಕಣ್ಣು ಮುಚ್ಚಿ ಕುಳಿತಿದ್ದಾರೆ ದೌರ್ಜನ್ಯ ತಡೆ ಕಾಯಿದೆ ಪ್ರಕಾರ ಕೇವಲ ಕಡತದಲ್ಲಿ ಮಾತ್ರ ಸಿಮಿತವಾಗಿದೆ
ಸರ್ಕಾರವು ದುಡಿಯುವ ವರ್ಗದ ಜನರಿಗೆ ಹಾಗೂ ದಲಿತ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ವರ್ಗದ ಬಡವರಿಗೂ ಬಡಜನರ ಕುಟುಂಬಕ್ಕೂ ಸರ್ಕಾರ ಮಾಸಿಕ ಕನಿಷ್ಠ ೧೫೦೦೦ಸಾವಿರ ಆರ್ಥಿಕ ನೆರವು ನೀಡಲು ಮುಂದಾಗಬೇಕು
ರಾಜ್ಯದಲ್ಲಿ ಇರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳನ್ನು ತಾಲೂಕು ಕೇಂದ್ರದಲ್ಲಿ ಇರುವ೨೦೦ ಬೆಡ್ಡ್ ಆಸ್ಪತ್ರೆ ಮಾಡಲು ಸರ್ಕಾರ ಮುಂದಾಗಬೇಕು
ರಾಜ್ಯದಲ್ಲಿ ಕೋವಿಡ್ ಮಾಹಮಾರಿ ರೋಗಿಗಳಿಗೆ ತುತ್ತಾಗಿ ಮರಣ ಹೊಂದಿದ ಕುಟುಂಬಗಳಿಗೆ ೧೦ ಲಕ್ಷ ಪರಿಹಾರ ಘೋಷಣೆ ಮಾಡಲು ಪ್ರಯತ್ನಿಸಬೇ
ಕು ರಾಜ್ಯದಲ್ಲಿ ಲಾಕ್ ಡೌನ್ ದಿಂದ ದುಡಿಯುವ ವರ್ಗದ ಜನರು ತುತ್ತು ಅನ್ನಕ್ಕಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸರ್ಕಾರವು ಬಡ ಕೂಲಿ ಕಾರ್ಮಿಕರಿಗೆ ಹಾಗೂ ಬೀದಿ ಬದಿಯಲ್ಲಿ ವ್ಯಾಪಾರಿಗಳಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರಿಗೆ ಪಡಿತರ ಚೀಟಿದಾರರಿಗೆ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಆಹಾರ ಪದಾರ್ಥಗಳು ದವಸ ಧಾನ್ಯಗಳ ಪ್ರಮಾಣವು ಹೆಚ್ಚಿಸಲು ಉಚಿತವಾಗಿ ನಿಡಲು ಮುಂದಾಗಬೇಕು ಎಂದು ಈ ಮೂಲಕ ಸರ್ಕಾರ ಮುಂದಾಗಿ ಬಡ ಕೂಲಿ ಕಾರ್ಮಿಕರಿಗೆ ದಲಿತ ಜನಾಂಗಕ್ಕೆ ಪರಿಶಿಷ್ಟ ಪಂಗಡದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯ ಮೂಲಕ ಆಡಳಿತ ವ್ಯವಸ್ಥೆ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ದಸಂಸ ಅಧ್ಯಕ್ಷ ಪ್ರಭುಲಿಂಗ ಮೇಗಳಮನಿ ತಾಲೂಕು ಅಧ್ಯಕ್ಷ ನಾಗರಾಜ ಹಾಲಬಾವಿ ತಾ ಸಂ ಅಕ್ರಂ ಪಾಷಾ ಶಿವಪ್ಪಾ ಮಾಚನೂರ ಸೇರಿದಂತೆ ಇತರರು ಇದ್ದರು.