ಎಸ್‌ಸಿಡಿಸಿಸಿ ಬ್ಯಾಂಕ್ ’ಜನಸಾಮಾನ್ಯರ ಬ್ಯಾಂಕ್

ಮಂಗಳೂರು, ಜ.೨- ಇತಿಹಾಸದಲ್ಲೇ ಪ್ರಥಮ ಬಾರಿಗೆ “ಜನರ ಬಳಿಗೆ ನಮ್ಮ ಬ್ಯಾಂಕ್ ಎನ್ನುವ ಆಶಯದೊಂದಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಆರಂಭಿಸಿದ ಅಭಿಯಾನಕ್ಕೆ ಶುಕ್ರವಾರ ಚಾಲನೆಯನ್ನು ನೀಡಲಾಯಿತು.

ಬ್ಯಾಂಕಿನ ಕೊಡಿಯಾಲ್ ಬೈಲ್ ಶಾಖೆಯಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ವಿನಯಕುಮಾರ್ ಸೂರಿಂಜೆ ಮಾತನಾಡಿ ’೧೦೬ ವರ್ಷಗಳ ಇತಿಹಾಸ ಇರುವ ಬ್ಯಾಂಕ್, ಜನಸಾಮಾನ್ಯರ ಬ್ಯಾಂಕ್ ಆಗಿ ಗುರುತಿಸಿಕೊಂಡಿದೆ.’

ಸದಾ ಗ್ರಾಹಕರ ಸೇವೆಗೆ ಬದ್ದವಾಗಿರುವ ಎಸ್‌ಸಿಡಿಸಿಸಿ ಬ್ಯಾಂಕ್  ಕೈಗೊಂಡಿರುವ ತ್ರೈಮಾಸಿಕ ಅಭಿಯಾನದಲ್ಲಿ ಸಂಚಯ/ಚಾಲ್ತಿ ಖಾತೆ ತೆರೆಯುವ, ಸಣ್ಣ ಉದ್ದಿಮೆಗಳಿಗೆ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಕೃಷಿ/ಕೃಷಿಯೇತರ ಸಾಲ ಮತ್ತು ಸ್ವ ಸಹಾಯ ಗುಂಪುಗಳಿಗೆ  ಸಾಲ ನೀಡುವ ಗುರಿಯನ್ನು ಹೊಂದಿದೆ ಎಂದರು.

ಬ್ಯಾಂಕಿನ ನಿರ್ದೇಶಕರಾದ ಶ್ರೀ ಕೆ. ಜೈರಾಜ್ ಬಿ.ರೈ ಅವರು ಮಾತನಾಡಿ ಬ್ಯಾಂಕ್ ಹೊಸ ಹೊಸ ಯೋಜನೆಯ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗಿದೆ. ಜನರು ಬ್ಯಾಂಕಿಂಗ್ ಸೇವೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಪಡೆಯಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಈ ಅಭಿಯಾನ ನಡೆಯುತ್ತಿದೆ ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.

ನಗು ಮುಖದ ಸೇವೆ – ವಿ.ಜಿ.ಪಾಲ್

ಬ್ಯಾಂಕಿನ ಹಿರಿಯ ಗ್ರಾಹಕರು ಹಾಗೂ ರಂಗಭೂಮಿ ಕಲಾವಿದರಾದ ಶ್ರೀ ವಿ.ಜಿ.ಪಾಲ್ ಅವರು ಈ ಸಂದರ್ಭದಲ್ಲಿ  ಮಾತನಾಡಿ ಎಸ್ ಸಿಡಿಸಿಸಿ ಬ್ಯಾಂಕಿನಲ್ಲಿ ಗ್ರಾಹಕರಿಗೆ  ನಗು ಮುಖದ ಸಂತೃಪ್ತಿ ಸೇವೆ ದೊರೆಯುತ್ತದೆ. ಇಲ್ಲಿನ ಸಿಬ್ಬಂದಿಗಳು ಸೇವಾನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಾರೆ. ಹಾಗಾಗಿ ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಬ್ಯಾಂಕಿಂಗ್ ವ್ಯವಹಾರ ನಡೆಸಲು ತುಂಬಾ ಖುಷಿಯಾಗುತ್ತದೆ ಎಂದರು.

ಮತ್ತೊರ್ವ ಹಿರಿಯ ಗ್ರಾಹಕರಾದ ಶ್ರೀ ಹೆರಾಲ್ಡ್ ಡಿ.ಜೆ.ವಾಸ್ ಅವರು ಮಾತನಾಡಿ ಎಸ್ ಸಿಡಿಸಿಸಿ ಬ್ಯಾಂಕ್ ಸರ್ವವಿಧದಲ್ಲೂ ಗ್ರಾಹಕರ ಪರವಾಗಿ ಇರುವಂತಹ ಬ್ಯಾಂಕ್. ವಾಣಿಜ್ಯ ಬ್ಯಾಂಕ್ ಗಿಂತಲೂ ಉತ್ಕೃಷ್ಟ ಸೇವೆ ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ ದೊರೆಯುತ್ತಿದೆ ಎಂದರು.  ಈ ಸಂದರ್ಭದಲ್ಲಿ ಹಿರಿಯ ಗ್ರಾಹಕರಾದ ಶ್ರೀಮತಿ ಮಾರ್ವಿಸ್ ಎಲ್.ಟಿ.ವಾಸ್ ದೀಪ ಪ್ರಜ್ವಲನೆ ಮಾಡಿದರು. ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ರವೀಂದ್ರ ಬಿ., ಮಹಾಪ್ರಬಂಧಕರಾದ ಶ್ರೀ ಗೋಪಿನಾಥ್ ಭಟ್, ಉಪ ಮಹಾಪ್ರಬಂಧಕರಾದ ಶ್ರೀ  ಅಶೋಕ್ ಕುಮಾರ್,  ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪೂರ್ಣಿಮಾ ಶೆಟ್ಟಿ ಹಾಗೂ ಶಾಖಾ ವ್ಯವಸ್ಥಾಪಕರುಗಳು  ಉಪಸ್ಥಿತರಿದ್ದರು.