ಎಸ್‌ಯುಸಿಐ ೭೩ ನೇ ಸಂಸ್ಥಾಪನಾ ದಿನಾಚರಣೆ

ರಾಯಚೂರು.ಏ.೨೪- ಎಸ್‌ಯುಸಿಐ ( ಕಮುನಿಷ್ಟ ) ಪಕ್ಷದ ೭೩ ನೇ ಸಂಸ್ಥಾಪನಾ ದಿವನ್ನು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಆಚರಿಸಲಾಯಿತು.
ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಚನ್ನಬಸವ ಜಾನೇಕಲ್ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಪಕ್ಷದ ಸಂಸ್ಥಾಪಕರಾದ ಕಾಮ್ರೆಡ್ ಶಿವದಾಸ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಜಿಲ್ಲಾ ಸಮಿತಿ ಸದಸ್ಯ ಚನ್ನಬಸವ ಜಾನೇಕಲ್ ಮಾತನಾಡಿದರು.
ನಮಗೆ ಬಂದಿರುವ ಸ್ವತಂತ್ರ ದೇಶದ ಕೇವಲ ಕೆಲವೆ ಕೆಲವು ಬಂಡವಾಲ ಶಾಹಿಗಳಿಗೆ ಬಂದಿದೆ. ಜನರ ಸಮಸ್ಯಗಳನ್ನು ನಿವಾರಿಸಲು ಇವುಗಳಿಂದ ಸಾಧ್ಯವಿಲ್ಲ ಎಂದರು.
೧೯೪೮ ರಲ್ಲಿ ಎಸ್‌ಯುಸಿಐ ( ಕಮುನಿಷ್ಟ ) ಪಕ್ಷವನ್ನು ಕಾಮ್ರೆಡ್ ಶಿವದಾಸ್ ಘೋಷ್ ಅವರು ಸ್ಥಾಪಿಸಿದರು. ಕೇವಲ ಕೆಲವೇ ಜನರು ಈ ಪಕ್ಷವನ್ನು ಸ್ಥಾಪಿಸಿದರು. ಜನರ ವರ್ಗ ಹಾಗೂ ಸಮೂಹ ಹೋರಾಟದ ಮೂಲಕ ದೇಶದಲ್ಲಿ ದೊಡ್ಡ ನೈಜ ಕಮುನಿಷ್ಟ ಪಕ್ಷವಾಗಿ ಬೆಳೆಯುತ್ತಿದೆ ಎಂದರು.
ಈಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ಕಾರ್ತಿಕ್, ಪೀರ್ ಸಾಬ್, ವಿನೋದ್ ಕುಮಾರ ಬಸವರಾಜ ಸೇರಿದಂತೆ ಇತರರು ಇದ್ದರು.