ಎಸ್‌ಪಿಬಿ, ರಾಜನ್ – ನಾಗೇಂದ್ರ ನೆನಪಿನೋತ್ಸವ

ಬೆಂಗಳೂರು, ಜ. ೫- ಕನ್ನಡದ ಖ್ಯಾತ ಚಲನ ಚಿತ್ರ ನಟ ಡಾ. ವಿಷ್ಣುವರ್ಧನ್, ಪಂಚ ಭಾಷಾ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಸಂಗೀತ ನಿರ್ದೇಶಕ ರಾಜನ್ ನಾಗೇಂದ್ರ ಅವರ ನೆನಪಿನೋತ್ಸವ ಕಾರ್ಯಕ್ರಮವನ್ನು ನಗರದ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪಾತಿ ಫೌಂಡೇಷನ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರ ಮತ್ತು ಪರಿಸರ ಸ್ನೇಹಿ ತಂಡದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಿ ವಿಷ್ಣುವರ್ಧನ್, ಬಾಲಸುಬ್ಯಮಣ್ಯಂ ಹಾಗೂ ರಾಜನ್ ನಾಗೇಂದ್ರ ಅವರ ಗುಣಗಾನ ಮಾಡಿದರು.
ಪಾತಿ ಫೌಂಡೇಷನ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರ ಮತ್ತು ಪರಿಸರ ಸ್ನೇಹಿ ತಂಡದ ವತಿಯಿಂದ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಹಾಗೂ ಪಂಚ ಭಾಷಾ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಹಿನ್ನೆಲೆ ಗಾಯಕರಾದ ರಾಜನ್ ನಾಗೇಂದ್ರರವರ ಏನೇ ನೆನಪಿನೋತ್ಸವವನ್ನು ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಕಿಶೋರ ೭ ಪಾಸ್ ೮ ಚಿತ್ರತಂಡದ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಾದ ಮಹೇಶ್ವರನ್ (ಪತ್ರಿಕಾ ಕ್ಷೇತ್ರ), ಶಂಕರನಾರಾಯಣ ಶಾಸ್ತ್ರಿ (ಧಾರ್ಮಿಕ ಕ್ಷೇತ್ರ), ಕೆ.ಪಿ. ನಾಗರಾಜ್ (ಮಾಧ್ಯಮ ಕ್ಷೇತ್ರ), ಜಗಪ್ಪ ಮಜಾ ಟಾಕೀಸ್ (ಕಲಾವಿದರ ಕ್ಷೇತ್ರ), ಎನ್.ಎಂ. ನವೀನ್ ಕುಮಾರ್ (ಸಾಮಾಜಿಕ ಕ್ಷೇತ್ರ), ನಜರ್‌ಬಾದ್ ನಟರಾಜ್ (ಸಾಮಾಜಿಕ ಕ್ಷೇತ್ರ), ವಿ. ದೊರೆಸ್ವಾಮಿ ನಿವೃತ್ತ (ಐಎಸ್‌ಐ) (ರಂಗಭೂಮಿ ಕಲಾವಿದರ ಕ್ಷೇತ್ರ), ಮಹೇಂದ್ರ ಸಿಂಗ್ ಕಾಳಪ್ಪ (ಸಾಮಾಜಿಕ ಕ್ಷೇತ್ರ), ಸುರೇಶ್ ಬಾಬು (ಆರೋಗ್ಯ ಕ್ಷೇತ್ರ), ದಶರಥ (ಕೊರೊನಾ ವಾರಿಯರ್ ಹಾಗೂ ಸಾಮಾಜಿಕ ಕ್ಷೇತ್ರ), ಡಾಕ್ಟರ್ ಲಕ್ಷ್ಮಿದೇವಿ (ವೈದ್ಯಕೀಯ ಕ್ಷೇತ್ರ), ಮಹಾದೇವಪ್ಪ (ಶಿಕ್ಷಣ ಕ್ಷೇತ್ರ) ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ನಗರ ಅಧ್ಯಕ್ಷ ಟಿ.ಎಸ್. ಶ್ರೀವತ್ಸ ದೇವರಾಜ ಅರಸು ಹಿಂದುಳಿದ ವರ್ಗದ ಪ್ರಾಧಿಕಾರ ಅಧ್ಯಕ್ಷ ಆರ್. ರಘು, ಕೌಟಿಲ್ಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ. ರಾಜಣ್ಣ, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಬಿಜೆಪಿ ಮುಖಂಡರಾದ ಯಶಸ್ವಿನಿ ಸೋಮಶೇಖರ್, ಬಿ.ಪಿ. ಮಂಜುನಾಥ್ ಭಾಗವಹಿಸಿದ್ದರು.