ಎಸ್‌ಡಿಪಿಐ ವತಿಯಿಂದ ಬೆಳ್ಳಾರೆಯಲ್ಲಿ ಪ್ರತಿಭಟನೆ

ಸುಳ್ಯ , ಮೇ ೨೮- ಕೇಂದ್ರ ಸರಕಾರದ ಕೃಷಿ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ನಿರಂತರವಾಗಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಇಂದಿಗೆ ೬ ತಿಂಗಳಾಗಿವೆ. ಈ ಸಂದರ್ಭದಲ್ಲಿ ರೈತರು ದೇಶದಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದು, ಪ್ರತಿಭಟನೆಗೆ ಎಸ್‌ಡಿಪಿಐ ಪಕ್ಷವು ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದು, ಇದರ ಭಾಗವಾಗಿ ಎಸ್ ಡಿಪಿಐ ಬೆಳ್ಳಾರೆ ವಲಯದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ, ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆ, ಎಸ್ ಡಿಪಿಐ ಬೆಳ್ಳಾರೆ ವಲಯ ಅಧ್ಯಕ್ಷ ಸಿದ್ದೀಕ್ ಎಂ., ಉಪಾಧ್ಯಕ್ಷ ಆಸಿರ್ ಎ.ಬಿ., ಸಮಿತಿ ಸದಸ್ಯರಾದ ಶಹೀದ್ ಎಂ., ಶಾಫಿ ಟಿ, ಸದ್ದಾಂ, ತಾಜುದ್ದೀನ್, ಜಾಬಿರ ಸಿಎಂ, ರಶೀದ್ ಎಂ.ಆರ್,ಹಾರಿಸ್ ಪಳ್ಳಿಮಜಲು ಮತ್ತಿತರರು ಉಪಸ್ಥಿತರಿದ್ದರು.