ಎಸ್‌ಡಿಪಿಐ ಜಿಲ್ಲಾಧ್ಯಕ್ಷರ ಬಂಧನ ವಿರೋಧಿಸಿ ಪ್ರತಿಭಟನೆ

ಕೋಲಾರ,ಡಿ.೨೫:ಎನ್.ಐ.ಎ ಸಂಸ್ಥೆಯು ಬೆಂಗಳೂರು ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷರನ್ನು ಬಂಧಿಸಿರುವುದನ್ನು ಖಂಡಿಸಿ ಎಸ್.ಡಿ.ಪಿ.ಐ ಕೋಲಾರ ಜಿಲ್ಲಾ ಘಟಕವು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಎನ್.ಐ.ಎ ಸಂಸ್ಥೆಯನ್ನ ಸರ್ಕಾರಗಳು ದುರ್ಬಳಕೆ ಮಾಡುತ್ತಿವೆ ಎಂದು ಅರೋಪಿಸಿದರು. ಎಸ್.ಶಾದುಜ್ ಜಮಾ ಮಾತನಾಡಿ, ಎನ್.ಐ.ಎ ದೇಶದಲ್ಲಿ ಇರುವ ತಿಮಿಂಗಳಗಳನ್ನು ಬಿಟ್ಟು ಇಲಿ ಹುಡುಕುವ ಕೆಲಸ ಮಾಡುತ್ತಿದೆ ಎಂದರು. ದೇಶದಲ್ಲಿರುವ ದೊಡ್ಡಮಟ್ಟದ ಕೇಸುಗಳು, ಹಗರಣಗಳನ್ನು ಬಿಟ್ಟು ಎಸ್.ಡಿ.ಪಿ.ಐ ಪಕ್ಷದ ವಿಷಯದಲ್ಲಿ ಮೂಗು ತುರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಕಾರ್ಯದರ್ಶಿ ಅಬ್ರಾರ್ ಅಹಮದ್ ಮಾತನಾಡಿ, ಎಸ್.ಡಿ.ಪಿ.ಐ ಬೆಂಗಳೂರು ಜಿಲ್ಲಾಧ್ಯಕ್ಷರನ್ನು ವಿನಾಕಾರಣ ವಶಕ್ಕೆ ತೆಗೆದುಕೊಂಡಿರುವುದನ್ನು ನೋಡಿದರೆ ಎಸ್.ಡಿ.ಪಿ.ಐ ಪಕ್ಷದ ಸದ್ದಡಗಿಸುವ ಮಾಡುವ ಹುನ್ನಾರ ನಡೆಯುತ್ತಿದೆ ಎಂದ ಅವರು, ಎಸ್.ಡಿ.ಪಿ.ಐ ಎಲ್ಲಾ ಅಡೆತಡೆಗಳನ್ನು ಕೆಡವಿ ಮುನ್ನುಗ್ಗಲಿದೆ ಇದನ್ನು ತಡೆಯಲು ಇನ್ನು ನಿಮ್ಮ ಹಗಲುಗನಸು ಎಂದರು.
ಪ್ರತಿಭಟೆನೆಯಲ್ಲಿ ಪ್ರಧಾನ ಕಾರ್ಯದಶಿ ಯಾಸೀನ್‌ಖಾನ್, ಉಪಾಧ್ಯಕ್ಷ ಜಮಾಲ್ ಅಹಮದ್, ಖಾಕಾ ಮೋಯಿನುದ್ದೀನ್, ಅಬ್ದುಲ್ ರಜಾಕ್, ಸುಲ್ತಾನ್, ಬಕಾಶ್, ಅಹಮದ್ ಬಾಯ್, ಸರ್ತಾಜ್ ಬಾಯ್, ಆಸೀಫ್ ಖಾನ್, ಜಿಲ್ಲಾ ಸಮಿತಿ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.