ಎಸ್‌ಡಿಎಂಸಿ ಅಧ್ಯಕ್ಷ ಮಹ್ಮದ್ ಹಾಜಿಬಾಬಾರಿಗೆ ಸನ್ಮಾನ

ಲಿಂಗಸುಗೂರು.ನ.೨೦-ಸರಕಾರಿ ಪಟ್ಟಣ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಿಕ್ಷಣ ಪ್ರೇಮಿ, ಸಮಾಜಸೇವಕ ಮಹ್ಮದ್ ಹಾಜಿಬಾಬಾ ಕರಡಕಲ್ ಇವರಿಗೆ ಆದಿಲ್ ಮೊಬೈಲ್ ಗೆಳೆಯರ ಬಳಗದಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಸಭೆ ಸೇರಿದ ಗೆಳೆಯರು ನಿಸ್ವಾರ್ಥವಾಗಿ ಶಿಕ್ಷಣ ರಂಗ ಸೇರಿ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ಹಾಜಿಬಾಬಾ ಅವರಿಗೆ ಸಂದ ಗೌರವ ಇದಾಗಿದೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸ್ಥಾನಗಳು, ಪದವಿಗಳು ಇವರಿಗೆ ದೊರಕಲೆಂದು ಶುಭ ಕೋರಿದರು.
ಸಹೃದಯಿ ಗೆಳೆಯರ ಸಲಹೆ, ಸಹಕಾರದಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು, ನನ್ನ ಕೈಲಾದ ಸೇವೆಯನ್ನು ಸಲ್ಲಿಸುತ್ತಿದ್ದೇನೆ. ನನ್ನ ಸೇವೆಯನ್ನು ಗುರುತಿಸಿ ಶಾಸಕ ಡಿ.ಎಸ್.ಹೂಲಗೇರಿಯವರು ಎಸ್‌ಡಿಎಂಸಿ ಅಧ್ಯಕ್ಷನನ್ನಾಗಿ ಮಾಡಿರುವುದು ನನ್ನ ಮೇಲಿನ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ. ಶಾಸಕರ ಹಾಗೂ ಗೆಳೆಯದ ಭರವಸೆಗೆ ತಕ್ಕಂತೆ ಶಾಲೆಯ ಅಭಿವೃದ್ಧಿಯತ್ತ ಹಾಗೂ ಮಕ್ಕಳ ಗುಣಮಟ್ಟದ ಕಲಿಕೆಯತ್ತ ಗಮನ ಹರಿಸುವ ಜೊತೆಗೆ, ನಿತ್ಯದ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆಂದು ಆತಿಥ್ಯ ಸ್ವೀಕರಿಸಿ ಹಾಜಿಬಾಬಾ ಮಾತನಾಡಿದರು.
ಗೆಳೆಯರ ಬಳಗದ ಮುಸ್ತಫಾ, ಜುಬೇರ್, ಫೇರೋಜ್, ವೆಂಕಟೇಶ ಸೇರಿ ಇತರರು ಇದ್ದರು.

೨೦ಎಲ್‌ಎನ್‌ಜಿ-೨. ಹಾಜಿಬಾಬಾಗೆ ಸನ್ಮಾನಿಸುತ್ತಿರುವದು.