ಎಸ್‌ಎಸ್ ಹೈಟೆಕ್ ಕಾಲೇಜಿನಿಂದ ಟೆಲಿ ಕನ್ಸಲ್ಟೇಷನ್

ದಾವಣಗೆರೆ.ಮೇ.೨೯; ರಾಜ್ಯ ಸರ್ಕಾರ, ಎಸ್‌ಎಸ್ ವೈದ್ಯಕೀಯ ಕಾಲೇಜ್, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ಬೆಂಗಳೂರು ಹಾಗೂ ಸ್ಟೆಪ್ ಒನ್ ಫ್ರೆಶ್‌ಡೆಸ್ಕ್ ಸಹಯೋಗದೂಂದಿಗೆ ಕೋವಿಡ್ 19 ರೋಗಿಗಳಿಗೆ ಉಚಿತ ಹೋಂ ಐಸೋಲೇಶನ್, ಟೆಲಿಕನ್ಸಲ್ಟೇಷನ್ ಚಿಕಿತ್ಸಾ ಕರ‍್ಯಕ್ರಮವು ಪ್ರಾರಂಭವಾಗಿದ್ದು, ದೂರವಾಣಿ ಕರೆ ಮೂಲಕ ಕರೆದಾರರಿಗೆ ಮಾಹಿತಿ ನೀಡಲಾಯಿತು.ಎಸ್‌ಎಸ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ವೈದ್ಯರು ಹಾಗೂ ವಿದ್ಯಾರ್ಥಿಗಳು ಕೋವಿಡ್ 19 ಪಾಸಿಟಿವ್ ಹೋಂ ಐಸೋಲೇಶನ್ ರೋಗಿಗಳಗೆ ಉಚಿತ ಟೆಲಿಕನ್ಸಲ್ಟೇಷನ್ ಸಲಹೆ, ಚಿಕಿತ್ಸೆ ಜೊತೆಗೆ ಸಮಾಲೋಚನೆ ಮಾಡಲಾಯಿತು.ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಿಂದ ಆಯ್ಕೆಯಾಗಿ ತರಬೇತಿ ಪಡೆದ ಕಾಲೇಜಿನ ಮಾಸ್ಟರ್ ಟ್ರೇರ‍್ಸ್ಗಳಾದ ಡಾ.ಬಸವರಾಜಪ್ಪ, ಡಾ.ಲತಾ.ಜಿ.ಎಸ್, ಡಾ.ಮಂಜುನಾಥ.ಜೆ, ಡಾ.ಹರೀಶ್ ಕುಮಾರ್.ವಿ.ಎಸ್, ಡಾ.ಮೃತ್ಯುಂಜಯ.ಎನ್ ಸೇರಿದಂತೆ ಅಂತಿಮ ವರ್ಷದ 130 ವೈದ್ಯಕೀಯ ವಿದ್ಯಾರ್ಥಿಗಳನ್ನು ಹಾಗೂ 15 ಜನ ತಜ್ಞ ವೈದ್ಯರುಗಳನ್ನು ತರಬೇತಿಗೊಳಿಸಿ ಈ ಕರ‍್ಯಕ್ರಮಕ್ಕೆ ನಿಯೋಜಿಸಲಾಗಿತ್ತು.ಐಸಿಎಂಆರ್ ಪೋರ್ಟಲ್‌ನಲ್ಲಿ ಕೋವಿಡ್ ಪಾಸಿಟಿವ್ ಎಂದು ದಾಖಲೆಗೊಂಡಿರುವ ರೋಗಿಗಳಿಗೆ ದೂರವಾಣಿ ಕರೆಗಳ ಮುಖಾಂತರ ಮಾತನಾಡಿಸಿ, ರೋಗಿಗಳ ಮಾನಸಿಕ ಸ್ಥಿತಿಯನ್ನು ಸದೃಢಗೊಳಸಿ ಇವರಲ್ಲಿ ರೋಗ ಲಕ್ಷಣಗಳಿಲ್ಲದ ಹಾಗೂ ತೀವ್ರತರದ ರೋಗ ಲಕ್ಷಣಗಳಿಲ್ಲದ ಕೋವಿಡ್ ಪಾಸಿಟಿವ್ ರೋಗಿಗಳನ್ನು ಸಮರ್ಥವಾಗಿ ವಿಂಗಡಿಸಿ, ತಜ್ಞ ವೈದ್ಯರುಗಳ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ಸೂಕ್ತ ಚಿಕಿತ್ಸೆ ಹಾಗೂ ಸಲಹೆ ಸಮಾಲೋಚನೆ ನೀಡಿ ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬಿದರು.ಚಿಕ್ಕ ಮಕ್ಕಳು, ಗರ್ಭಿಣಿ ಸ್ತಿçÃಯರು, ಮಧುಮೇಹ, ರಕ್ತದೊತ್ತಡ, ಹೃದಯ ಸಂಬAಧಿ, ಕ್ಯಾನ್ಸರ್‌ನಂತಹ ಇತರೆ ಕಾಯಿಲೆಗಳಿರುವ ಕೋವಿಡ್ ಪಾಸಿಟಿವ್ ರೋಗಿಗಳಿಗೆ ತಜ್ಞ ವೈದ್ಯರುಗಳ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಚಿಕಿತ್ಸೆ ಹಾಗೂ ಸಮಾಲೋಚನೆ ಮಾಡಲಾಯಿತು.
ರಾಜಾದ್ಯಂತ 20ಸಾವಿರಕ್ಕೂ ಅಧಿಕ ಕೋವಿಡ್ ಪಾಸಿಟಿವ್ ರೋಗಿಗಳು ಸದುಪಯೋಗ ಪಡೆದುಕೊಂಡಿದ್ದಾರೆ. ವೈದ್ಯಕೀಯ ಕಾಲೇಜಿನ ಈ ಸೇವೆಯನ್ನು ರಾಜ್ಯ ಸರ್ಕಾರ ಹಾಗೂ ಆರ್‌ಜಿಹೆಚ್ ವಿವಿ ಶ್ಲಾಘನೆ ವ್ಯಕ್ತ ಪಡಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್.ಪ್ರಸಾದ್ ತಿಳಿಸಿದ್ದಾರೆ.