ಎಸ್‌ಎಸ್‌ಆರ್‌ಜಿ: ವಿಶ್ವ ಪರಿಸರ ದಿನಾಚರಣೆ

ರಾಯಚೂರು.ಜೂ.೦೯- ನಗರದ ಪ್ರತಿಷ್ಠಿತ ತಾರಾನಾಥ ಶಿಕ್ಷಣ ಸಂಸ್ಥೆಯ ಸೋಮ ಸುಭದ್ರಮ್ಮ ರಾಮನಗೌಡ ಮಹಿಳಾ ಮಹಾವಿದ್ಯಾಲಯದಲ್ಲಿ ಹಾಗೂ ಟಿ.ಎಸ್.ಎಸ್. ಬಾಲಕಿಯರ ಪ.ಪೂ ಕಾಲೇಜಿನ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಆಧ್ಯಕ್ಷರಾದ ಮಲ್ಲಿಕಾರ್ಜುನ ವಕೀಲರು, ಸಸಿ ನೆಡುವುದರ ಮೂಖಾಂತರ ಮಾತನಾಡಿ ಹಸಿರಿನೊಡನೆ ಉಸಿರಿದೆ ಉಸಿರನುಳಿಸಲು ಹಸಿರುಗಿಡ ಮರಗಳಬೆಳೆಸಬೇಕಿದೆ. ಪ್ರಕೃತಿಯನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು.
ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ ರತಿಲಾಲ್ ಪಟೇಲ್ ಕಾರ್ಯದರ್ಶಿಗಳು ಎಸ್.ಎಸ್.ಆರ್.ಜಿ ಮಹಿಳಾ ಮಹಾವಿದ್ಯಾಲಯ, ರಾಯಚೂರು ಇವರು ಮರ ಗಿಡಗಳು ಮನುಷ್ಯನ ಪ್ರಾಣ ವಾಯು ಆಗಿದೆ ಪ್ರಕೃತಿ ವಿನಾಶದಿಂದ ರೋಗ ರುಜಿನಿಗಳು ಹೆಚ್ಚಾಗುತ್ತವೆ. ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಬೇಕು ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಟಿ.ಎಸ್.ಎಸ್. ಬಾಲಕಿಯರ ಪ.ಪೂ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಎಮ್. ವಿಜಯಕುಮಾರ್ ಇವರು ಮಾತನಾಡಿ ಇಂದಿನ ಯುವ ಪೀಳಿಗೆಗೆ ಪರಿಸರದ ಬಗ್ಗೆ ಒಲವು ಮೂಡಿಸಬೇಕು. ಪ್ರತಿವರ್ಷ ಮರಗಳ ಸಂಖ್ಯೆ ಹೆಚ್ಚು ಮಾಡಲು ಪ್ರತಿಯೊಬ್ಬ ವಿದ್ಯಾರ್ಥಿಗಳು ಪಣತೊಡಬೇಕು ಎಂದರು.
ಎಸ್.ಎಸ್.ಆರ್.ಜಿ. ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸತ್ಯನಾರಾಯಣ ರವರು, ಹಾಗೂ ಟಿ.ಎಸ್.ಎಸ್.ಬಾಲಕಿಯರ ಪ.ಪೂ.ಕಾಲೇಜಿನ ಪ್ರಾಚಾರ್ಯರಾದ ವೆಂಕಟೇಶ ದೊಡ್ಡಮನಿ, ಎನ್.ಎಸ್.ಎಸ್. ಮುಖ್ಯ ಸಂಯೋಜಕರಾದ ಕುಮಾರಿ ಮಹೇಶ್ವರಿ ಯಾದವ್, ಹಾಗೂ ಉಪನ್ಯಾಸಕರಾದ ಎಮ್.ಇಲಿಯಾಸ್, ದೈಹಿಕ ನಿದೇಶಕರಾರ ವಿರೇಶ್ ನಾಯಕ್, ಗ್ರಂಥಪಾಲಕರಾದ ಶರಣಪ್ಪ ಮತ್ತು ಕಾಲೇಜಿನ ಬೋಧಕೇತರ ಸಿಬ್ಬಂದಿಗಳು, ಎನ್.ಎಸ್.ಎಸ್. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು.