ಎಸ್‌ಎಂಕೆ ಮೊಮ್ಮಗ ಡಿಕೆಶಿ ಪುತ್ರಿ ನಿಶ್ಚಿತಾರ್ಥ

ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರವರ ಮೊಮ್ಮಗ ಅಯ್ಯಪ್ಪ ಹೆಗಡೆ ಅವರ ನಿಶ್ಚಿತಾರ್ಥ ನಗರದಲ್ಲಿ ನಡೆಯಿತು.

ಬೆಂಗಳೂರು, ನ.೧೯- ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರ ಮೊಮ್ಮಗ ಅಮರ್ತ್ಯ ಹೆಗಡೆ ಅವರ ವಿವಾಹ ನಿಶ್ಚಿತಾರ್ಥ ಸಮಾರಂಭ ನಗರದಲ್ಲಿಂದು ನಡೆಯಿತು.
ಖಾಸಗಿ ಹೋಟೆಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಎರಡು ಕುಟುಂಬದ ಸದಸ್ಯರು, ಆಪ್ತರು ಭಾಗವಹಿಸಿ ಶುಭ ಹಾರೈಸಿದರು.
ಎಸ್ ಎಂ ಕೃಷ್ಣ ಅವರ ಅಳಿಯ ಸಿದ್ದಾರ್ಥ ಹೆಗಡೆ ಮತ್ತು ಮಾಳವಿಕ ಅವರ ಪುತ್ರ ಅಮರ್ತ್ಯ ಹೆಗಡೆ ಅವರೊಂದಿಗೆ ಡಿಕೆ ಶಿವಕುಮಾರ್ ಮತ್ತು ಉಷಾ ದಂಪತಿಯ ಪುತ್ರಿ ಐಶ್ವರ್ಯ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು.
ಹೊಸ ಬಾಳಿಗೆ ಹೆಜ್ಜೆ ನೀಡಲಿರುವ ಹುಡುಗ-ಹುಡುಗಿಗೆ ಎಸ್ .ಎಂ. ಕೃಷ್ಣ, ಡಿ.ಕೆ ಶಿವಕುಮಾರ್ ದಂಪತಿಗಳು ಶುಭ ಹಾರೈಸಿದರು.
ಈ ವೇಳೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಪಾಲ್ಗೊಂಡಿದ್ದರು.
ಸಂಸದ ಡಿಕೆ ಸುರೇಶ್ ಸೇರಿದಂತೆ ಎರಡು ಕುಟುಂಬಗಳ ಆಪ್ತರು ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.