ಎಸ್ಸೆಸ್ಸೆಲ್ಸಿ 3ನೇ ದಿನದ ದ್ವಿತೀಯ ಭಾಷಾ ವಿಷಯ ಪರೀಕ್ಷೆ ಯಶಸ್ವಿ

ಕೋಲಾರ,ಏ,೭- ಜಿಲ್ಲೆಯ ೮೩ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ದ್ವಿತೀಯ ಭಾಷೆ ಕನ್ನಡ, ಇಂಗ್ಲೀಷ್ ವಿಷಯದ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಗುರುವಾರ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಖಾಸಗಿ ಅಭ್ಯರ್ಥಿಗಳು ೬೦ ಮಂದಿ, ಹೊಸ ಅಭ್ಯರ್ಥಿಗಳು ೧೮೦ ಮಂದಿ ಸೇರಿದಂತೆ ಒಟ್ಟು ೨೪೦ ಮಂದಿ ಗೈರಾಗಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.
ಜಿಲ್ಲೆಯ ವಿವಿಧ ಶಾಲೆಗಳ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಸುಗಮ ಪರೀಕ್ಷೆ ಕುರಿತಂತೆ ಪರಿಶೀಲನೆ ನಡೆಸಿದ ನಂತರ ಮಾಧ್ಯಮದೊಂದಿಗೆ ಅವರು ಮಾತನಾಡುತ್ತಿದ್ದರು.
ಪರೀಕ್ಷೆಗೆ ಹೆಸರು ನೊಂದಾಯಿಸಿದ್ದ ೧೯೭೬೦ ವಿದ್ಯಾರ್ಥಿಗಳ ಪೈಕಿ ೧೯೫೨೦ ಮಂದಿ ಹಾಜರಾಗಿದ್ದು, ೨೪೦ ಮಂದಿ ಗೈರಾಗಿದ್ದರು. ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೇ ಸುಗಮವಾಗಿ ನಡೆದಿದೆ ಎಂದು ತಿಳಿಸಿದರು.
ಇದರಲ್ಲಿ ಪರೀಕ್ಷೆಗೆ ಬರೆದ ಹೊಸ,ಪುನಾರವರ್ತಿತ ಅಭ್ಯರ್ಥಿಗಳು ನೋಂದಾಯಿತ ೧೯೨೬೮ ಮಂದಿ ಪೈಕಿ ೧೯೦೮೮ ಮಂದಿ ಹಾಜರಾಗುವ ಮೂಲಕ ೧೮೦ ಮಂದಿ ಗೈರಾಗಿದ್ದಾರೆ. ಖಾಸಗಿ ಅಭ್ಯರ್ಥಿಗಳು ೪೯೨ ಮಂದಿ ಮಾತ್ರ ನೋಂದಾಯಿಸಿದ್ದು, ಅವರಲ್ಲಿ ೪೩೨ ಮಂದಿ ಹಾಜರಾಗಿ ೬೦ ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದರು.
ಬಂಗಾರಪೇಟೆ ತಾಲ್ಲೂಕಿನ ೯ ಕೇಂದ್ರಗಳಲ್ಲಿ ದ್ವಿತೀಯ ಭಾಷಾ ವಿಷಯಕ್ಕೆ ೨೩೮೭ ಮಂದಿ ನೊಂದಾಯಿಸಿದ್ದು, ೨೩೬೨ ಮಂದಿ ಹಾಜರಾಗಿ ೨೫ ಮಂದಿ ಗೈರಾಗಿದ್ದಾರೆ, ಕೆಜಿಎಫ್ ತಾಲ್ಲೂಕಿನ ೧೩ ಕೇಂದ್ರಗಳಲ್ಲಿ ೩೨೨೧ ಮಕ್ಕಳು ಹೆಸರು ನೊಂದಾಯಿಸಿದ್ದು, ೩೧೮೨ ಮಂದಿ ಹಾಜರಾಗಿ ೩೯ ಮಂದಿ ಗೈರಾಗಿದ್ದಾರೆ.
ಕೋಲಾರ ತಾಲ್ಲೂಕಿನ ೨೨ ಕೇಂದ್ರಗಳಲ್ಲಿ ೪೯೮೧ ಮಂದಿ ಹೆಸರು ನೊಂದಾಯಿಸಿದ್ದು, ೪೯೨೭ ಮಂದಿ ಹಾಜರಾಗಿ ಕೇವಲ ೫೪ ಮಂದಿ ಗೈರಾಗಿದ್ದಾರೆ. ಮಾಲೂರು ತಾಲ್ಲೂಕಿನ ೧೪ ಕೇಂದ್ರಗಳಲ್ಲಿ ೩೦೫೩ ಮಂದಿ ಹೆಸರು ನೊಂದಾಯಿಸಿದ್ದು, ೩೦೩೬ ಮಂದಿ ಹಾಜರಾಗಿದ್ದು, ೧೭ ಮಂದಿ ಗೈರಾಗಿದ್ದಾರೆ.
ಮುಳಬಾಗಿಲು ತಾಲ್ಲೂಕಿನ ೧೩ ಕೇಂದ್ರಗಳಲ್ಲಿ ೩೦೪೫ ಮಂದಿ ನೊಂದಾಯಿಸಿದ್ದು, ೩೦೧೬ ಮಂದಿ ಹಾಜರಾಗಿದ್ದು, ೨೯ ಮಂದಿ ಗೈರಾಗಿದ್ದಾರೆ, ಶ್ರೀನಿವಾಸಪುರ ತಾಲ್ಲೂಕಿನ ೧೩ ಕೇಂದ್ರಗಳಲ್ಲಿ ೨೫೮೧ ಮಂದಿ ಹೆಸರು ನೊಂದಾಯಿಸಿದ್ದು, ೨೫೬೫ ಮಂದಿ ಹಾಜರಾಗಿದ್ದು, ೧೬ ಮಂದಿ ಗೈರಾಗಿದ್ದಾರೆ.
೬೦ ಮಂದಿ ಗೈರು
ಕೋಲಾರ ಇಡೀ ಜಿಲ್ಲೆಗೆ ಇರುವ ಒಂದೇ ಒಂದು ಖಾಸಗಿ ಅಭ್ಯರ್ಥಿಗಳ ಕೇಂದ್ರದಲ್ಲಿ ೪೯೨ ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ಅವರಲ್ಲಿ ೪೩೨ ಮಂದಿ ಹಾಜರಾಗಿದ್ದು, ಉಳಿದ ೬೦ ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದರು.
೩ನೇ ದಿನದ ದ್ವಿತೀಯ ಭಾಷಾ ಪರೀಕ್ಷೆಯಲ್ಲಿ ಜಿಲ್ಲಾದ್ಯಂತ ಯಾವುದೇ ಕೇಂದ್ರದಲ್ಲಿ ಯಾವುದೇ ಅವ್ಯವಹಾರಗಳು ನಡೆದ ಬಗ್ಗೆ ವರದಿಯಾಗಿಲ್ಲ, ಪರೀಕ್ಷೆ ಸುಗಮವಾಗಿ ನಡೆಸುವಲ್ಲಿ ಜಿಲ್ಲಾಧಿಕಾರಿಗಳು,ಜಿಪಂ ಸಿಇಒ, ಎಸ್ಪಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಶಿಕ್ಷಕರು,ಪೋಷಕರು, ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ ಎಂದರು.