ಬೀದರ್: ಮೇ.27:ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೈದ ವಿದ್ಯಾರ್ಥಿಗಳಿಗೆ ಇಲ್ಲಿಯ ಅಣ್ಣಯ್ಯ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್‍ನಲ್ಲಿ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಕಠಿಣ ಪರಿಶ್ರಮದ ಮೂಲಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬಹುದು ಎಂದು ಟ್ರಸ್ಟ್ ಗೌರವಾಧ್ಯಕ್ಷ ಪ್ರಶಾಂತ ದ್ಯಾಡೆ ಹೇಳಿದರು.
ವಿದ್ಯಾರ್ಥಿಗಳು ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆದು ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಶಿವಪುತ್ರಪ್ಪ ನುಡಿದರು.
ಪಾಲಕರು ಮಕ್ಕಳಿಗಾಗಿಯೂ ಕೆಲ ಸಮಯ ಮೀಸಲಿಡಬೇಕು. ಅವರ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಗ್ರಾಮ ವಿಕಾಸ ಟ್ರಸ್ಟ್ ಅಧ್ಯಕ್ಷ ಬಸವರಾಜ ಬಶೆಟ್ಟಿ ಹೇಳಿದರು.
ಮಹರ್ಷಿ ಶಾಲೆ ಅಧ್ಯಕ್ಷ ಮಥನ್ ಮಾತನಾಡಿದರು. 2023 ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಆದರ್ಶ, ಸುಕನ್ಯಾ ಹಾಗೂ ಮಮತಾ ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಟ್ರಸ್ಟ್ ಅಧ್ಯಕ್ಷೆ ವೈಶಾಲಿ ದ್ಯಾಡೆ ಅಧ್ಯಕ್ಷತೆ ವಹಿಸಿದ್ದರು. ಮಹೇಶ ಎಂ, ವಿಜಯ್, ಶ್ರೀಕಾಂತ, ಶಶಿಕಾಂತ, ರವೀಂದ್ರ, ಬಸವಕಿರಣ, ಶಿಲ್ಪಾ ಇದ್ದರು. ಪ್ರತಾಪ ಸ್ವಾಗತಿಸಿದರು. ರಾಜಕುಮಾರ ನಿರೂಪಿಸಿದರು.