ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿನಿಗೆ ಪ್ರತಿಭಾ ಸತ್ಕಾರ

ಕಲಬುರಗಿ :ಜೂ.4: ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಬಡ ಕುಟುಂಬದ ಸುಧಾ ಎಂಬ ವಿದ್ಯಾರ್ಥಿನಿಯು ಶೇ.92 ಅಂಕಗಳೊಂದಿಗೆ ಉತ್ತೀರ್ಣರಾಗಿ ಉತ್ತಮ ಸಾಧನೆ ಮಾಡಿದ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಗ್ರಾಮದಲ್ಲಿರುವ ಅವರ ಮನೆಯಲ್ಲಿ ಗ್ರಹ ಸನ್ಮಾನ ಜರುಗಿತು.
ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ, ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ ಬಾಳ್ಳಿ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಪ್ರಮುಖರಾದ ಕಾಶಿನಾಥ ಚೇಂಗಟಿ, ಶಾಂತಪ್ಪ ಚೇಂಗಟಿ, ರವಿ ಚೇಂಗಟಿ, ಸುಷ್ಮಾ ಕೆ.ಚೇಂಗಟಿ, ಅಣ್ಣಾರಾಯ ದಣ್ಣೂರ್, ಸುವರ್ಣ, ಶಾಂತಾಬಾಯಿ, ಶರಣಮ್ಮ, ಶಿವಕುಮಾರ, ಶಿವಪುತ್ರ, ಶಿವಲೀಲಾ, ಸುಧಾ, ಶಿವಶಂಕರ, ಸುಜ್ಞಾನಿ, ಪ್ರಭಾಕರ ಸೇರಿದಂತೆ ಮತ್ತಿತರರಿದ್ದರು.