ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ


ಧಾರವಾಡ,ಎ.3: ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಅಂಚೆ ಕಾರ್ಡಿನಲ್ಲಿಯೇ ಚಿತ್ರ ಬಿಡಿಸುವ ಕಲಾಸಾರಥ್ಯದ ‘ಚಿತ್ರ-ಮಿತ್ರ’ ರಾಜ್ಯ ಮಟ್ಟದ ಪಠ್ಯಪೂರಕ ವಿಜ್ಞಾನ ಚಿತ್ರ ರಚನಾ ಸ್ಪರ್ಧೆಯನ್ನು ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ.
ಮಾನವನ ಹೃದಯದ ನೀಳಛೇದ ನೋಟ, ಮಾನವನ ಮೆದುಳು, ಮಾನವನ ವಿಸರ್ಜನಾಂಗ ವ್ಯೂಹ ಮತ್ತು ನೆಫ್ರಾನ್‍ನ ಚಿತ್ರಗಳನ್ನು ಪೆÇೀಸ್ಟಕಾರ್ಡನಲ್ಲಿಯೇ ಬಣ್ಣ ಹಾಗೂ ಇತರೆ ಮಾಧ್ಯಮಗಳನ್ನು ಬಳಸಿ ಚಿತ್ರ ರಚಿಸಲು ತಿಳಿಸಿ, ಸಿದ್ಧಗೊಂಡ ಅಂಚೆ ಕಾರ್ಡುಗಳಲ್ಲಿ ಪ್ರತಿ ಶಾಲೆಯಿಂದ ಆಯ್ಕೆಯಾದ ಅತ್ಯುತ್ತಮ 4 ಚಿತ್ರಗಳನ್ನು ರಾಜ್ಯಹಂತಕ್ಕೆ ಕಳಿಸಬೇಕು.
ಇದು ರಾಜ್ಯಮಟ್ಟದ ಸ್ಪರ್ಧೆಯಾಗಿದ್ದು, ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರ್ಗಿ ವಿಭಾಗಗಳಿಂದ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಪ್ರತೀ ವಿಭಾಗದಲ್ಲಿಯೂ 4 ಉತ್ತಮ ಚಿತ್ರಕಲಾಕೃತಿಗಳಿಗೆ ಬಹುಮಾನ ನೀಡಲಾಗುವುದು. ಅಂಚೆಕಾರ್ಡುಗಳನ್ನು ಕಳುಹಿಸಲು ಕೊನೆಯ ದಿನ ಏಪ್ರೀಲ್-9.
ಉದ್ಘಾಟನೆ: ನಗರದ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿರ್ದೇಶಕರಾದ ಮಮತಾ ನಾಯಕ ಮಾದರಿ ಪೆÇೀಸ್ಟಕಾರ್ಡಗಳನ್ನು ಬಿಡುಗಡೆಗೊಳಿಸಿ ಚಿತ್ರ-ಮಿತ್ರಕ್ಕೆ ಚಾಲನೆ ನೀಡಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ವಿದ್ಯಾ ನಾಡಗೇರ, ಕಿರಿಯ ಸಂಶೋಧನಾಧಿಕಾರಿ ಮಹಾದೇವಿ ಮಾಡಲಗೇರಿ, ಇ-ಆಡಳಿತದ ಕಾರ್ಯಕ್ರಮ ಅಧಿಕಾರಿ ಶಾಂತಾ ಮೀಸಿ, ಚಿತ್ರಕಲಾ ವಿಷಯ ಪರಿವೀಕ್ಷಕ ಪಿ. ಆರ್. ಬಾರಕೇರ, ಬೆಳಗಾವಿ ವಿಭಾಗದ ಸ್ಪರ್ಧೆಯ ಸಂಘಟಕ ಮಹಾಂತೇಶ ಹುಬ್ಬಳ್ಳಿ, ಜಿಲ್ಲಾ ಸಂಚಾಲಕ ಬಾಬಾಜಾನ ಮುಲ್ಲಾ ಇದ್ದರು.