ಇಂಡಿ:ಎ.1:ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯು ತಾಲೂಕಿನಾದಂತ 18 ಕೇಂದ್ರಗಳಲ್ಲಿ ಮಾ. 31 ರಂದು ಶಾಂತಿಯುತವಾಗಿ ನಡೆಯಿತು ಎಂದು ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ತಿಳಿಸಿದ್ದಾರೆ.
ಪರೀಕ್ಷೆಗೆ ತಾಲೂಕಿನ ಸರಕಾರಿ,ಅನುದಾನಿತ, ಅನುದಾನ ರಹಿತ ಶಾಲೆಗಳ 4349 ವಿದ್ಯಾರ್ಥಿಗಳಲ್ಲಿ 4252 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 97 ವಿದ್ಯಾರ್ಥಿಗಳು ಗೈರು ಆಗಿದ್ದಾರೆ.
ಶುಕ್ರವಾರ ಕನ್ನಡ ಪ್ರಥಮ ಭಾಷೆ ಇತ್ತು. ಯಾವದೇ ನಕಲು ಪ್ರಕರಣಗಳು ದಾಖಲಾಗಿಲ್ಲ ಎಂದು ರಾಠೋಡ ತಿಳಿಸಿದ್ದಾರೆ.