ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸಲು ಆಗ್ರಹ

ಕಲಬುರಗಿ:ಜೂ.10: ರಾಜ್ಯದಲ್ಲಿ ಎರಡನೇ ಅಲೆ ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತಿದ್ದು ಈ ವರ್ಷ ಹೆಚ್ಚಿನ ರೀತಿಯಲ್ಲಿ ಚಿಕ್ಕ ಮಕ್ಕಳಿಗೆ ಬಂದಿದೆ. ಚಿಕ್ಕ ಮಕ್ಕಳು ಕೊರೊನಾದಿಂದ ಸಾವೀಗಿಡಾಗಿದ್ದನ್ನು ಸರ್ಕಾರದ ಕಣ್ಣಿಗೆ ಕಂಡಿದೆ. ಸರ್ಕಾರ ಕಂಡು ಕಂಡು ಹತ್ತನೇ ತರಗತಿ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಬೇಕೆಂದು ಸರಕಾರ ತೀರ್ಮಾನಿಸಿದ್ದು ತಪ್ಪು . ಪಿಯುಸಿ ಪರೀಕ್ಷೆಯನ್ನು ಹೇಗೆ ರದ್ದು ಮಾಡಿದ್ದಾರೆ ಅದೇ ರೀತಿಯಾಗಿ ಕೊರೊನಾ ವೈರಸ್ ನಿಂದಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ರದ್ದು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿದ ಅವರು, ರಾಜ್ಯ ಸರ್ಕಾರ ಕೂಡಲೇ ಹತ್ತನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಬೇಕು ಕಾರಣ ರಾಜ್ಯದಲ್ಲಿ ಚಿಕ್ಕ ಮಕ್ಕಳಿಗೆ ಕೊರೊನಾದಿಂದ ಎಷ್ಟೊಂದು ಜನರು ಮಕ್ಕಳು ಸಾವಿಗೆ ಈಡಾಗಿದ್ದಾರೆ. ರಾಜ್ಯದಲ್ಲಿ ಶಾಲಾ ಮಕ್ಕಳ ಸಲುವಾಗಿ ಪಾಲಕರು ತಮ್ಮ ಜೀವನವನ್ನು ಮಾಡುವುದು ಮಕ್ಕಳಿಗಾಗಿ ಈ ವರ್ಷ ಕೊರೊನಾ ಭಯದಿಂದ ಮಕ್ಕಳ ಪಾಲಕರು ನೊಂದುಕೊಂಡಿದ್ದಾರೆ. ಸರಕಾರ ಕೊರೊನಾ ವೈರಸ್ ಭಯದಿಂದ ಪಿಯುಸಿ ಪರೀಕ್ಷೆಯನ್ನು ಹೇಗೆ ರದ್ದು ಮಾಡಿದ್ದಾರೆ ಅದೇ ರೀತಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು. ರಾಜ್ಯ ಸರ್ಕಾರ ಈಗ ಮಕ್ಕಳ ಜೊತೆಗೆ ಆಟ ಆಡುವುದನ್ನು ಬಿಟ್ಟು ರಾಜ್ಯ ಸರ್ಕಾರ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ರದ್ದು ಮಾಡುವ ಸಲುವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು ವಿಧಾನಸಭೆಯಲ್ಲಿ ಚರ್ಚಿಸಿ ಒಂದು ನಿರ್ಧಾರ ಕೈಗೊಳ್ಳಬೇಕು. ರಾಜ್ಯದಲ್ಲಿ ಕೊರೊನಾ ಹೆಚ್ಚಿನ ಸಂಖ್ಯೆಯಲ್ಲಿ ಇರುವಾಗ ಶಾಲಾ ಮಕ್ಕಳು ಕೊರೊನಾದಿಂದ ಭಯಭೀತರಾಗಿದ್ದಾರೆ. ಮಕ್ಕಳ ಪಾಲಕರು ಈಗಲೇ ಚಿಂತೆಯಲ್ಲಿ ತೊಡಗಿದ್ದಾರೆ. ಕೊರೊನಾ ವೈರಸ್ ನಿಂದ ಈಗಾಗಲೇ ಎಷ್ಟೊಂದು ಮಕ್ಕಳು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಸೊಂಕಿತರು ಇದ್ದಾರೆ ಮುಂದೆ ಶಾಲಾ ಮಕ್ಕಳಿಗೆ ಏನಾದರೂ ಆದರೆ ಯಾರು ಇರುವುದಿಲ್ಲ ಎಂದು ಪ್ರಶ್ನೆ ಮಾಡಿದರು. ಮಕ್ಕಳ ಜೊತೆ ಚೆಲ್ಲಾಟ ಆಡುವುದನ್ನು ಬಿಟ್ಟು ಈಗ ಸರಕಾರ ಎಸ್‌ ಎಸ್ ಎಲ್ ಸಿ ಪರೀಕ್ಷೆಯನ್ನು ರದ್ದು ಮಾಡಬೇಕು ಒಂದು ವೇಳೆ ಸರಕಾರ ಪರೀಕ್ಷೆಯನ್ನು ರದ್ದು ಮಾಡದಿದ್ದರೆ ಎರಡನೇ ಅಲೆ ಮಹಾಮಾರಿ ಕೊರೊನಾವನ್ನು ಲೆಕ್ಕಿಸದೇ ಕರವೇ (ಕನ್ನಡಿಗರ ಬಣ) ಸಂಘಟನೆ ವತಿಯಿಂದ ಉಗ್ರರೂಪದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದರು.