ಎಸ್ಸೆಸ್ಸೆಲ್ಸಿ ಪರೀಕ್ಷೆ ;ಮೊದಲ ದಿನದ ಪರೀಕ್ಷೆ ಯಶಸ್ವಿ

ಕೋಲಾರ,ಏ,೨- ಜಿಲ್ಲೆಯ ೮೩ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಖಾಸಗಿ ಅಭ್ಯರ್ಥಿಗಳು ೬೭ ಮಂದಿ, ಹೊಸ ಅಭ್ಯರ್ಥಿಗಳು ೧೭೭ ಮಂದಿ ಸೇರಿದಂತೆ ಒಟ್ಟು ೨೪೪ ಮಂದಿ ಗೈರಾಗಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.ನಗರದ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಬರುವ ಮಕ್ಕಳಿಗೆ ಸ್ವತಃ ಹೂ ನೀಡಿ ಸ್ವಾಗತಿಸಿ, ಶುಭ ಕೋರಿದ ಅವರು, ಪರೀಕ್ಷೆ ಮುಗಿದ ನಂತರ ಮಾಧ್ಯಮಗಳಿಗೆ ಮಾಹಿತಿ ಒದಗಿಸಿದರು.೨೦೨೦ರ ಮಾರ್ಚ್‌ನಲ್ಲಿ ನಡೆದಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ೩೧೦ ವಿದ್ಯಾರ್ಥಿಗಳು ಮೊದಲ ದಿನ ಗೈರಾಗಿದ್ದರು ಆದರೆ ಈ ಬಾರಿ ಅದರ ಪ್ರಮಾಣ ಕೇವಲ ೨೪೪ಕ್ಕಿಳಿದಿದೆ ಎಂದರು.ಪರೀಕ್ಷೆಗೆ ಹೆಸರು ನೊಂದಾಯಿಸಿದ್ದ ೧೯೮೧೩ ವಿದ್ಯಾರ್ಥಿಗಳ ಪೈಕಿ ೧೯೫೬೯ ಮಂದಿ ಹಾಜರಾಗಿದ್ದು, ೨೪೪ ಮಂದಿ ಗೈರಾಗಿದ್ದರು. ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೇ ಸುಗಮವಾಗಿ ನಡೆದಿದೆ ಎಂದು ತಿಳಿಸಿದರು.ಬಂಗಾರಪೇಟೆ ತಾಲ್ಲೂಕಿನ ೯ ಕೇಂದ್ರಗಳಲ್ಲಿ ಪ್ರಥಮ ಭಾಷೆಗೆ ೨೩೯೦ ಮಂದಿ ನೊಂದಾಯಿಸಿದ್ದು, ೨೩೬೮ ಮಂದಿ ಹಾಜರಾಗಿ ೨೨ ಮಂದಿ ಗೈರಾಗಿದ್ದಾರೆ, ಕೆಜಿಎಫ್ ತಾಲ್ಲೂಕಿನ ೧೩ ಕೇಂದ್ರಗಳಲ್ಲಿ ೩೨೨೫ ಮಕ್ಕಳು ಹೆಸರು ನೊಂದಾಯಿಸಿದ್ದು, ೩೧೮೫ ಮಂದಿ ಹಾಜರಾಗಿ ೪೦ ಮಂದಿ ಗೈರಾಗಿದ್ದಾರೆ.
ಕೋಲಾರ ತಾಲ್ಲೂಕಿನ ೨೨ ಕೇಂದ್ರಗಳಲ್ಲಿ ೪೯೮೭ ಮಂದಿ ಹೆಸರು ನೊಂದಾಯಿಸಿದ್ದು, ೪೯೩೩ ಮಂದಿ ಹಾಜರಾಗಿ ಕೇವಲ ೫೪ ಮಂದಿ ಗೈರಾಗಿದ್ದಾರೆ. ಮಾಲೂರು ತಾಲ್ಲೂಕಿನ ೧೪ ಕೇಂದ್ರಗಳಲ್ಲಿ ೩೦೫೮ ಮಂದಿ ಹೆಸರು ನೊಂದಾಯಿಸಿದ್ದು, ೩೦೪೩ ಮಂದಿ ಹಾಜರಾಗಿದ್ದು, ೧೫ ಮಂದಿ ಗೈರಾಗಿದ್ದಾರೆ.
ಮುಳಬಾಗಿಲು ತಾಲ್ಲೂಕಿನ ೧೩ ಕೇಂದ್ರಗಳಲ್ಲಿ ೩೦೬೮ ಮಂದಿ ನೊಂದಾಯಿಸಿದ್ದು, ೩೦೩೮ ಮಂದಿ ಹಾಜರಾಗಿದ್ದು, ೩೦ ಮಂದಿ ಗೈರಾಗಿದ್ದಾರೆ, ಶ್ರೀನಿವಾಸಪುರ ತಾಲ್ಲೂಕಿನ ೧೩ ಕೇಂದ್ರಗಳಲ್ಲಿ ೨೫೮೫ ಮಂದಿ ಹೆಸರು ನೊಂದಾಯಿಸಿದ್ದು, ೨೫೬೯ ಮಂದಿ ಹಾಜರಾಗಿದ್ದು, ೧೬ ಮಂದಿ ಗೈರಾಗಿದ್ದಾರೆ.
ಖಾಸಗಿ ಕೇಂದ್ರದಲ್ಲಿ
೬೭ ಮಂದಿ ಗೈರು
ಕೋಲಾರದ ಖಾಸಗಿ ಅಭ್ಯರ್ಥಿಗಳ ಕೇಂದ್ರದಲ್ಲಿ ೫೦೦ ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ಅವರಲ್ಲಿ ೪೩೩ ಮಂದಿ ಹಾಜರಾಗಿದ್ದು, ಉಳಿದ ೬೭ ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದರು.ಮೊದಲ ದಿನದ ಪರೀಕ್ಷೆಯಲ್ಲಿ ಜಿಲ್ಲಾದ್ಯಂತ ಯಾವುದೇ ಕೇಂದ್ರದಲ್ಲಿ ಯಾವುದೇ ಅವ್ಯವಹಾರಗಳು ನಡೆದ ಬಗ್ಗೆ ವರದಿಯಾಗಿಲ್ಲ, ಪರೀಕ್ಷೆ ಸುಗಮವಾಗಿ ನಡೆಸುವಲ್ಲಿ ಜಿಲ್ಲಾಧಿಕಾರಿಗಳು,ಜಿಪಂ ಸಿಇಒ, ಎಸ್ಪಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಶಿಕ್ಷಕರು,ಪೋಷಕರು, ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ ಎಂದರು.ಮುಂದಿನ ಐದು ವಿಷಯಗಳ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸುವ ಆತ್ಮಸ್ಥೈರ್ಯ ತಂದುಕೊಟ್ಟಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.