ದೇವದುರ್ಗ,ಏ.೧೬- ತಾಲೂಕಿನ ೧೬ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಶನಿವಾರ ಶಾಂತಿಯುತವಾಗಿ ಮುಕ್ತವಾಯವಾಗಿದ್ದು, ವಿವಿಧ ಕೇಂದ್ರಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕ ವೃಷೌಭೇಂದ್ರಯ್ಯ ಸ್ವಾಮಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿನೀಡಿ ಪರಿಶೀಲಿಸಿತು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ, ಜಾಲಹಳ್ಳಿಯ ಬಾಲಕರ ಸರ್ಕಾರಿ ಪ್ರೌಢಶಾಲೆ, ಗಲಗ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶನಿವಾರ ಸಮಾಜ ವಿಜ್ಞಾನ ಪರೀಕ್ಷೆ ಶಾಂತಿಯುವಾಗಿ ಜರುಗಿವೆ. ಪರೀಕ್ಷಾ ಕೇಂದ್ರದಲ್ಲಿ ಸ್ವಚ್ಛತೆ, ಕುಡಿವ ನೀರು, ಆಸನ ವ್ಯವಸ್ಥೆ, ಉತ್ತಮ ವಾತಾವರಣ ಸೇರಿ ಮೂಲಸೌಲಭ್ಯಗಳ ಬಗ್ಗೆ ಡಿಡಿಪಿಐ ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುಖದೇವ್, ಬಿಆರ್‌ಸಿ ಶಿವರಾಜ, ಅಕ್ಷರ ದಾಸೋಹ ಅಧಿಕಾರಿ ಬಂದೋಲಿಸಾಬ್ ಇತರರಿದ್ದರು.