ಎಸ್ಸೆಸ್ಸೆಲ್ಸಿ ಟಾಪರ್ ವಿದ್ಯಾರ್ಥಿನಿ ಶಿಕ್ಷಣಕ್ಕೆ ನೆರವು


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮೇ.16: ಟ್ಯೂಷನ್‍ಗೆ ಹೋಗದೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 91ರಷ್ಟು ಅಂಕ ಗಳಿಸಿ ಸಾಧನೆ ಮಾಡಿರುವ ತಿಪ್ಪಾಪುರ ಗ್ರಾಮದ ಮಂಗಳಾ ಅವರ ಮನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ್ ಎನ್.ಹಳ್ಳಿಗುಡಿ ಭೇಟಿ ನೀಡಿ, ಪ್ರತಿಭಾವಂತ ವಿದ್ಯಾರ್ಥಿನಿಯನ್ನು ಸನ್ಮಾನಿಸಿದರು.
ಮುಂದಿನ ಶೈಕ್ಷಣಿಕ ಬದುಕು ಉತ್ತರೋತ್ತರವಾಗಿ ಬೆಳೆಯಲಿ. ವಿಜ್ಞಾನ ವಿಭಾಗದಲ್ಲಿ ಹೆಚ್ಚು ಸಾಧನೆ ಮಾಡುವಂತೆ ಬಿಇಒ ಶುಭ ಹಾರೈಸಿದರು.
ತುಂಗಭದ್ರಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಸುರೇಶ ಅಂಗಡಿ, ತಮ್ಮ ಸಿಂಚನ ಪ್ರಕಾಶನದಿಂದ ಪ್ರಥಮ ಪಿಯುಸಿ ಪ್ರವೇಶಕ್ಕೆ ಕಾಲೇಜು ಶುಲ್ಕ 20,000 ರೂ ಕೊಡುಗೆ ನೀಡಿದರು.
ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಹೆಚ್. ಮಲ್ಲಿಕಾರ್ಜುನ, ಬಿ.ಆರ್.ಪಿ. ಸಚಿನ್ ಆರಾಧ್ಯ ಇದ್ದರು.