ಎಸ್ಸಿ, ಎಸ್ಟಿ ಮೀಸಲಾತಿ ಹೋರಾಟ ಮಾಡಿದರೂ ಮೀಸಲಾತಿ ನೀಡದ ಸರ್ಕಾರ ಕಾಂಗ್ರೇಸ್ ಸರ್ಕಾರ – ಗೋವಿಂದ ಕಾರಜೋಳ


ಸಂಜೆವಾಣಿ ವಾರ್ತೆ
ಸಂಡೂರು:ಮೇ: 3: ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಿ ಎಂದು ಬೃಹತ್ ಸಮಾವೇಶ ಮಾಡಿ ಒತ್ತಾಯಿಸಿದಾಗ ಸಿದ್ದರಾಮಯ್ಯ ತಿರಸ್ಕರಿಸಿದರು, ಸಮಾವೇಶಕ್ಕೆ ಹೋದ ದಲಿತರು ಅಪಘಾತದಿಂದ ಸತ್ತಾಗ ಪರಿಹಾರ ಕೊಡಲಿಲ್ಲ, ಒಳಮೀಸಲಾತಿ ಹೋರಾಟಕ್ಕೆ ತಿಲಾಂಜಲಿ ಇಟ್ಟ ಕಾಂಗ್ರೇಸ್ ಸರ್ಕಾರವನ್ನು ಜನ ತಿರಸ್ಕರಿಸುವ ಮೂಲಕ ಸಂಡೂರು ಅಭ್ಯರ್ಥಿ ಶಿಲ್ಪಾ ರಾಘವೇಂದ್ರ ಅವರಿಗೆ ಮತ ಹಾಕಿ ಎಂದು ಸಚಿವ ಗೋವಿಂದ ಕಾರಜೋಳ ಮನವಿ ಮಾಡಿದರು.
ಅವರು ಇಂದು ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸಿ ಮಾತನಾಡಿ ಡಾ.ಬಿ.ಅರ್. ಅಂಬೇಡ್ಕರ್ ಕೊಟ್ಟ ಮೀಸಲಾತಿಯಲ್ಲಿ ಒಳಮೀಸಲಾತಿಗಾಗಿ 40 ವರ್ಷಗಳಿಂದ ಎಸ್ಸಿ, ಎಸ್ಟಿ ಮೀಸಲಾತಿ ಹೋರಾಟ ಮಾಡಿದರೂ ಮೀಸಲಾತಿ ನೀಡದ ಸರ್ಕಾರ ಕಾಂಗ್ರೇಸ್ ಸರ್ಕಾರ, ಇದು ಮೋಸ ಎಷ್ಟು ಮಾಡಿದ್ದಾರೆ ಎಂದರೆ ಅಂಬೇಡ್ಕರ್ ಅವರನ್ನು ಸೋಲಿಸಿದರು, ಭಾರತ ರತ್ನ ಪ್ರಶಸ್ತಿ ನೀಡಲಿಲ್ಲ,ಜಗಜೀವನ್‍ರಾಮ್ ಅವರನ್ನು ಸೋಲಿಸಿ ಪಕ್ಷದಿಂದ ಹೊರ ಹಾಕಿದ್ದು, ದಲಿತ ಮುಖ್ಯಮಂತ್ರಿಯಾಗುತ್ತಾರೆ ಎಂದು ಪರಮೇಶ್ವರ ಅವರನ್ನು ಸೋಲಿಸಿದ್ದು, ಮುನಿಯಪ್ಪ ಅವರನ್ನು ಸೋಲಿಸಿದ್ದು ಇದೇ ಕಾಂಗ್ರೇಸ್ ಸರ್ಕಾರ, ದಲಿತರ ಮತಗಳು ಬೇಕು, ಅದರೆ ದಲಿತರಿಗೆ ಅಧಿಕಾರ ಬೇಡ ಎನ್ನುವ ಧೋರಣೆ ಹೊಂದಿದ ಕಾಂಗ್ರೇಸ್ ಎಲ್ಲಾ ರೀತಿಯಲ್ಲಿ ದಲಿತರನ್ನು ಶೋಷಣೆ ಮಾಡಿದೆ, ಅಖಂಡ ಶ್ರೀನಿವಾಸ ಮೂರ್ತಿಯವರನ್ನು ದಲಿತರು ಎಂದು 80 ಸಾವಿರ ಮತಗಳಿಂದ ಗೆದ್ದವರನ್ನು ಬೀದಿಗೆ ನಿಲ್ಲಿಸಿದವರು, ಗುಡ್ಡಗಾಡು ಮಹಿಳೆಗೆ ರಾಷ್ಟ್ರಪತಿ ಮಾಡಿದ ಸರ್ಕಾರ ಬಿಜೆಪಿ ಸರ್ಕಾರ, ಇದೇ ಸಿದ್ದರಾಮಯ್ಯ ಒಳಮೀಸಲಾತಿ ಜಾರಿಗೆ ನಾನು ಮಾಡಲಿಲ್ಲ, ಹಾಳಾದ ಬಿಜೆಪಿ ಮಾಡಿದರು ಎಂದರು, ಅಲ್ಲದೆ ಡಿ.ಕೆ.ಶಿವಕುಮಾರ ರದ್ದು ಮಾಡುತ್ತೇವೆ ಎನ್ನುತ್ತಿದ್ದಾರೆ, ಅದ್ದರಿಂದ ಅದೇಶ ಜಾರಿಗೆ ಮಾಡುವ ಬಿಜೆಪಿ ಅಭ್ಯರ್ಥಿ ಶಿಲ್ಪಾ ರಾಘವೇಂದ್ರ ಅವರಿಗೆ ಮತ ಹಾಕಿ ಇಡೀ ರಾಜ್ಯದಲ್ಲಿ ಏಕೈಕ  ಎಸ್ಟಿ ಮಹಿಳೆಗೆ ಟಿಕೇಟ್ ನೀಡಿದ್ದು ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮೂಲಕ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮೋರ್ಚಾ ಅಧ್ಯಕ್ಷ ಲಕ್ಷ್ಮಣಜೀ ಮಾತನಾಡಿದರು, ಈ ಸಂದರ್ಭದಲ್ಲಿ ಅಭ್ಯರ್ಥಿ ಶಿಲ್ಪಾ ರಾಘವೇಂದ್ರ, ಜಿ.ಟಿ. ಪಂಪಾಪತಿ, ಓಬಳೇಶ್, ಕುಮಾರನಾಯ್ಕ, ಕಿನ್ನೂರೇಶ್ವರ, ಇತರ ಎಲ್ಲಾ ಮುಖಂಡರು ಮಾತನಾಡಿದರು.