ಎಸ್‍ಸಿಪಿ ಅಡಿ 4.75 ಕೋಟಿ.ರೂ ಬಿಡುಗಡೆ

ಕಲಬುರಗಿ ಸೆ 21: ಕೃಷ್ಣಭಾಗ್ಯ ಜಲನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮದ ವಿಶೇಷ ಘಟಕ ಯೋಜನೆ ಅಡಿ ಕೈಗೆತ್ತಿಕೊಂಡಿರುವ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ತಿಳಿಸಿದರು.
ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ವಿಶೇಷ ಘಟಕ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಕುರಿತು ವಿಧಾನ ಪರಿಷತ್ತು ಸದಸ್ಯ ಬಿ.ಜಿ ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು 2021-22 ರಲ್ಲಿ 4.75 ಕೋಟಿ ರೂ ಬಿಡುಗಡೆಯಾಗಿದೆ.ಈ ಪೈಕಿ ಜೇವರಗಿ ತಾಲೂಕಿನಲ್ಲಿ 75 ಲಕ್ಷ ರೂವೆಚ್ಚದಲ್ಲಿ ತೆರದ ಬಾವಿ,ಕೊಳವೆ ಬಾವಿ ಮತ್ತು ಪೈಪಲೈನ್ ಕೆಲಸಗಳಿಗೆ ಅಂದಾಜು ಪತ್ರಿಕೆ ಸಿದ್ಧತೆ ಹಂತದಲ್ಲಿದೆ ಎಂದರು.
ಕಲಬುರಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 250 ಲಕ್ಷ ರೂ,ಯಾದಗಿರಿ ಜಿಲ್ಲೆ ಸುರಪುರ ತಾಲೂಕಿಗೆ 250 ಲಕ್ಷ ರೂ,ಶಹಾಪುರ ತಾಲೂಕಿಗೆ 75 ಲಕ್ಷ ರೂ,ಯಾದಗಿರಿಗೆ 250 ಲಕ್ಷ ರೂ,ಗುರುಮಠಕಲ್‍ಗೆ 75 ಲಕ್ಷ ರೂ ಬಿಡುಗಡೆಯಾಗಿದೆ ಎಂದು ವಿವರಿಸಿದರು.
ಅಮರಜಾ ಯೋಜನೆಯಡಿ ಅಳಂದ ತಾಲೂಕಿನ ವೈಜಾಪುರ ಗ್ರಾಮದಲ್ಲಿ ತೆರೆದ ಬಾವಿ ಮೂಲಕ ನೀರಾವರಿಗೆ 20 ಲಕ್ಷ ರೂ ಬಿಡುಗಡೆ ಮಾಡಲಾಗಿದೆ.ಹೀಗೆ ಅನೇಕ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ.ಭೂಸನೂರ ತಾಂಡಾದಿಂದ ಸಂಗೊಳಗಿ(ಜಿ) ತಾಂಡಾವರೆಗೆ ಸಿಸಿ ರಸ್ತೆಕಾಮಗಾರಿಗೆ 50 ಲಕ್ಷ ರೂ ನೀಡಿದ್ದು,ಕಾಮಗಾರಿ ಪೂರ್ಣಗೊಂಡು ಬಿಲ್ ಪಾವತಿಸಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಅವರುತಿಳಿಸಿದರು.