ಎಸ್‍ಸಿ,ಎಸ್‍ಟಿ ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವಸ್ಥ : ಆಸ್ಪತ್ರೆಗೆ ದಾಖಲು

ಸಂಜೆವಾಣಿ ವಾರ್ತೆ

ಹೊಸಪೇಟೆ ಆ10: ರಾತ್ರಿ ಚಿಕನ್ ಸೇವಿಸಿದ ಎಸ್‍ಟಿ ಹಾಸ್ಟೆಲ್ ವಿದ್ಯಾರ್ಥಿಗಳು ಮಧ್ಯರಾತ್ರಿ ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾದ ಘಟನೆ ಹೊಸಪೇಟೆಯಲ್ಲಿ ಜರುಗಿದೆ.ನಗರದ ಎಸ್‍ಟಿ ಹಾಸ್ಟೇಲ್ ವಿದ್ಯಾರ್ಥಿನಿಯರು ಎಂದಿನಂತೆ ರಾತ್ರಿ ವೆಜ್ ಹಾಗೂ ನಾನ್‍ವೆಚ್ ಸಿದ್ದಪಡಿಸಿದ್ದ ಊಟ ಮಾಡಿ ಹೊಟ್ಟೆನೋವು ಎಂದು ರಾತ್ರಿ ನಗರದ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜರುಗಿದೆ.  134 ವಿದ್ಯಾರ್ಥಿನಿಯರ ಪೈಕಿ  ಮಧ್ಯರಾತ್ರಿ 2 ಗಂಟೆ ಸುಮಾರಿಗೆ 28 ವಿದ್ಯಾರ್ಥಿಗಳು ಹೊಟ್ಟೆನೋವು, ವಾಂತಿ ಭೇದಿಯಿಂದ ಬಳಲಾರಂಭಿಸಿದ್ದು ತಕ್ಷಣವೇ ವಾರ್ಡ್‍ನ್ ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತಕ್ಷಣವೇ ಚಿಕಿತ್ಸೆ ಆರಂಭವಾಗಿದ್ದರಿಂದ ಯಾವುದೇ ತೊಂದರೆಯಾಗಿಲ್ಲಾ, ಪ್ರಾಯಶಃ ಫುಡ್ ಪಾಯಜನ್ ಆಗಿರಬಹುದು ಎನ್ನಲಾಗಿದ್ದು ಉಳಿದಂತೆ ಬೆಳಿಗ್ಗೆ ಮತ್ತೆ 6 ವಿದ್ಯಾರ್ಥಿಗಳಿಗೆ ವಾಂತಿ ಭೇದಿಯ ಲಕ್ಷಣಗಳ ಕಂಡ ಹಿನ್ನೆಲೆಯಲ್ಲಿ ಅವರನ್ನು ಸಹ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.ನೀರಿನ ಶುದ್ಧೀಕರಣ ಘಟಕ ಹಾಳಾಗಿದ್ದು, ಆಹಾರ ನೀರು ಏನು ಕಾರಣ ಎಂಬುದು ತನಿಖೆಯಿಂದ ತಿಳಿಯಬೇಕಾಗಿದ್ದು 128 ವಿದ್ಯಾರ್ಥಿನಿಯರು ಇರುವ ಹಾಸ್ಟೆಲ್‍ನಲ್ಲಿ ಇದೀಗ 34 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದು ಉಳಿದವರ ಬಗ್ಗೆಯೂ ನಿಗಾ ಇಡಲಾಗಿದೆ. 17 ವಿದ್ಯಾರ್ಥಿನಿಯರು ಕೇವಲ ವೆಜ್ ಆಹಾರ ಸೇವನೆ ಮಾಡಿದ್ದು ಅವರಿಗೆ ಯಾವುದೆ ತೊಂದರೆಯಾಗಿಲ್ಲ.ಭೇಟಿ: ಆರೋಗ್ಯ ವಿಚಾರಣೆವಿಷಯ ಅರಿಯುತ್ತಲೆ ಜಿಲ್ಲಾಧಿಕಾರಿ ದಿವಾಕರ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವವಹಣಾಧಿಕಾರಿ ಸದಾಶಿವ ಪ್ರಭು, ಯುವ ಮುಖಂಡ ಹಾಗೂ ಶಾಸಕ ಗವಿಯಪ್ಪ ಪುತ್ರ ಗುರುದತ್ತ ನೂರು ಹಾಸಿಗೆ ಅಸ್ಪತ್ರೆಗೆ ಭೇಟಿ ನೀಡಿ ಮುರಾರ್ಜಿ ದೇಸಾಯಿ ಎಸ್‍ಸಿ ಎಸ್‍ಟಿ ಹಾಸ್ಟೆಲ್ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿ ವಿದ್ಯಾರ್ಥಿನಿಯರಿಗೆ ದೈರ್ಯ ಹೇಳಿದರು.ಈ ಮಧ್ಯ ಸಂಜೆವಾಣಿಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ದಿವಾಕರ್ ತಕ್ಷಣವೇ ಆಸ್ಪತ್ರೆಯಲ್ಲಿ ತಾತ್ಕಾಲಿಕ ಆಸ್ಪತ್ರೆ ಆರಂಭಿಸಲಾಗಿದೆ. ಜೊತೆಗೆ ಆಬ್ಯೂಲೇನ್ಸ್ ಸಹ ಹಾಸ್ಟೆಲ್ ನಲ್ಲಿಯೇ ಇಡಲಾಗಿದ್ದು ತುರ್ತು ಸಂದರ್ಭದಲ್ಲಿ ಬಳಕೆಗೆ ಅವಕಾಶ ನೀಡಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಯಾವುದೆ ತೊಂದರೆ ಇಲ್ಲಾ ಎಂದರು.ತನಿಖೆಗೆ ಆದೇಶ:ಈ ಮಧ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ವಾರ್ಡ್‍ನ ಮತ್ತು ಉಸ್ತುವಾರಿಗಳ ಬಗ್ಗೆ ಅಪಸ್ವರ ಕೇಳಿಬಂದಿದೆ, ಆದಾಗ್ಯೂ ಘಟನೆಗೆ ಕಾರಣ ಅರಿಯುವಲ್ಲಿ ಉಪವಿಭಾಗಾಧಿಕಾರಿಗಳ ನೇತ್ರತ್ವದಲ್ಲಿ ತನಿಖೆ ನಡೆಸಲು ಸೂಚಿಸಲಾಗಿದೆ, ಘಟನೆಗೆ ಆಹಾರ. ನೀರು ಅಥವಾ ಕಾರಣ ಅರಿಯಲು ಸೂಚಿಸಲಾಗಿದೆ ನಿರ್ಲಕ್ಷ್ಯ ಕಾರಣವಾಗಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು ತನಿಖೆ ಆರಂಭಿಸಲಾಗಿದೆ.