ಎಸ್‌ಸಿ,ಎಸ್‌ಟಿ ನೌಕರರು ಜಾಗೃತಿ ಜಿಲ್ಲಾ ಸಮಾವೇಶ

ರಾಯಚೂರು ಜ,೧೮ :- ಎಸ್ಸಿ-ಎಸ್ಟಿ ಸಮುದಾಯದ ಸರಕಾರಿ ನೌಕರರು ತಳಮಟ್ಟದ ಸಮುದಾಯದ ಜಾತಿ ಸಂಘಟನೆಗಳಲ್ಲಿ ಗುರುತಿಸಿಕೊಂಡು ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕೆಂದು ರಾಜ್ಯಾಧ್ಯಕ್ಷರಾದ ಬಿ ಶಿವಶಂಕರ ಮಾತಾನಾಡಿದರು.
ಇಂದು ರಾಯಚೂರು ನಗರದ ಕೃಷಿ ವಿಶ್ವವಿದ್ಯಾಲಯದ ಸಭಾ ಭವನದಲ್ಲಿ ನಡೆದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜಿಲ್ಲಾ ಮಟ್ಟದ ಪ್ರಥಮ ಜಾಗೃತ ಸಮಾವೇಶದಲ್ಲಿ ನಡೆದ
ಜಾತಿ ಸಂಘಟನೆಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಎಸ್ಸಿ, ಎಸ್ಟಿ ಸರಕಾರಿ ನೌಕರರನ್ನು ಅವಮಾನಿಸುವ ಪರಿಪಾಠ ಇದೆ. ಇದು ಮೇಲ್ದಾತಿಗಳ ಕುತಂತ್ರವಾಗಿದೆಯಷ್ಟೆ. ನಮ್ಮದು ಜಾತಿಗಳಿಂದಲೇ ರೂಪಿತಗೊಂಡಿರುವ ಸಮಾಜವಾಗಿದೆ. ಇಲ್ಲಿ ಮೇಲ್ಮುಕ ಚಲನೆಗೂ, ಕೆಳಮುಖ ಚಲನೆಗೂ ಜಾತಿಯೇ ಕಾರಣವಾಗಿದೆ. ಈ ನಿಟ್ಟಿನಲ್ಲಿ ಎಸ್ಸಿ, ಎಸ್ಟಿ ನೌಕರರು ತಮ್ಮ ಜಾತಿ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಸಮುದಾಯದ ಯುವ ಜನತೆಯನ್ನು ಮುನ್ನೆಲೆಗೆ ತರಬೇಕೆಂದು ಅವರು ಆಶಿಸಿದ್ದಾರೆ.
ಎಸ್ಸಿ ಸಮುದಾಯಕ್ಕೆ ಶೇ.೧೫ರಷ್ಟು, ಎಸ್ಟಿ ಸಮುದಾಯಕ್ಕೆ ಶೇ.೩ರಷ್ಟು ಮೀಸಲಾತಿಯಿದೆ. ಆದರೆ, ಹಿಂದುಳಿದವ ವರ್ಗಗಳಿಗೆ ಶೇ.೩೨ರಷ್ಟು ಮೀಸಲಾತಿಯಿದೆ. ಆದರೂ ಹಿಂದುಳಿದ ವರ್ಗದ ಮಂದಿ ಎಸ್ಸಿ, ಎಸ್ಟಿ ಸಮುದಾಯವನ್ನು ಮೀಸಲಾತಿಯನ್ನು ಮುಂದಿಟ್ಟುಕೊಂಡು ಅವಮಾನಿಸುತ್ತಾರೆ. ಹೀಗಾಗಿ ನಾನು ಹಿಂದುಳಿದವ ವರ್ಗಗಳ ಸಮುದಾಯವನ್ನು ಯಾವಾಗಲು ಆತ್ಮವಂಚಕ ಸಮುದಾಯವೆಂದು ಕರೆಯುತ್ತಿರುತ್ತೇನೆಂದು ಹೇಳಿದರು ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸರ್ಕಾರ ಸೇವೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ನೌಕರರಿಗೆ ಡಾ ಬಿ ಆರ್ ಅಂಬೇಡ್ಕರ್ ಸರ್ವ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ, ರಾಯಚೂರು, ಮಾನವಿ, ಲಿಂಗಸ್ಗೂರು, ಮಸ್ಕಿ, ದೇವದುರ್ಗ, ಸಿಂಧನೂರು,ಸಿರವಾರ ತಾಲೂಕಿನಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕರರು ಹಾಗೂ ಸರ್ವ ಪದಾಧಿಕಾರಿಗಳು ಸದಸ್ಯರು ಸೇರಿದಂತೆ ಎಲ್ಲ ಸರ್ಕಾರಿ ನೌಕರರು ಉಪಸ್ಥಿತರಿದ್ದರು.