ಎಸ್‌ವಿಬಿಸಿಯಿಂದ ಕನ್ನಡ, ಹಿಂದಿ ಚಾನಲ್ ಅರಂಭ

ಕೋಲಾರ,ಸೆ,೭- ತಿರುಮಲ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಕರ್ನಾಟಕ ಮಾತ್ರವಲ್ಲದೆ ವಿಶ್ವದ ಪ್ರತಿ ಮನೆ,ಮನೆ ತಲುಪಿಸುವ ದಿಸೆಯಲ್ಲಿ ಟಿ.ಟಿ.ಡಿ. ನಿರ್ವಹಣೆಯು ಕಳೆದ ಅಕ್ಟೋಬರ್ ೨೦೨೧ರಲ್ಲಿ ಎಸ್.ವಿ.ಬಿ.ಸಿ.-೩ ಕನ್ನಡ ಮತ್ತು ಎಸ್.ವಿ.ಬಿ.ಸಿ.-೪ ಹಿಂದಿ ಚಾನೆಲ್‌ಗಳನ್ನು ಪ್ರಾರಂಭಿಸಿದೆ. ಬೆಳಿಗ್ಗೆ ೬ ರಿಂದ ಮಧ್ಯಾಹ್ನ ೧೨ರವರೆಗೆ ಪೂಜಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುವುದು ಎಂದು ಎಸ್.ವಿ.ಬಿ.ಸಿ ಚಾನೆಲ್ ನಿರ್ದೇಕಿ ಕೆ.ಸಿ.ವಸಂತ ಕವಿತಾ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿ.ಟಿ.ಡಿಯ ಮತ್ತು ಇತರೆ ಹಿಂದೂ ದತ್ತಿ ದೇವಾಲಯಗಳ ಚಟುವಟಿಕೆಗಳಿ ಮತ್ತು ಯೋಜನೆಗಳನ್ನು ಉತ್ತೇಜಿಸುವ ದಿಸೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಗುಡಿಗೊಂದು ಗೋಮಾತ ಕಳೆದ ವರ್ಷ ಪ್ರಾರಂಭಿಕವಾಗಿ ೫ ದೇವಾಲಯಗಳಿಗೆ ಗೊಮಾತೆ ನೀಡುವ ಮೂಲಕ ಚಾಲನೆ ನೀಡಿದೆ ಎಂದರು.
ಟಿಟಿಡಿಯ ಧರ್ಮ ಪ್ರಚಾರ ಪರಿಷತ್ತಿನ ಚಟುವಟಿಕೆಗಳನ್ನು ಬಲಪಡೆಸಲು ಮತ್ತು ವೆಂಕಟೇಶ್ವರ ತತ್ವದಲ್ಲಿ ಭಕ್ತಿ ಮತ್ತು ಜ್ಞಾನವನ್ನು ಬೆಳೆಸಲು ಸಂಸ್ಕೃತ ಯೋಗ, ತತ್ವಶಾಸ್ತ್ರ ಮತ್ತು ಪ್ರಾಚೀನ ವೇದಗಳು, ಉಪನಿಷತ್ತುಗಳು, ಶಸ್ತ್ರಗಳು ಇತ್ಯಾದಿಗಳು ಸಂಕೀರ್ಣ ವಿಷಯಗಳ ಮೂಲಕ ಜನಸಾಮಾನ್ಯರಿಗೆ ಎಸ್.ವಿ.ಬಿ.ಸಿ ಮೂಲಕ ಸಂಸ್ಕೃತಿಕ, ಸಾಂಸ್ಕರಗಳ ಶಿಕ್ಷಣವನ್ನು ನೀಡಲಾಗುವುದು ಎಂದು ಹೇಳಿದರು.
ಕರ್ನಾಟಕವು ದೇವನಾಡು ಭಾರತದ ಏಕೈಕ ರಾಜ್ಯವಾಗಿದೆ. ಭಾರತೀಯ ತ್ರಿಮಥಾಚಾರ್ಯರು ತಮ್ಮ ಭಕ್ತಿ ಪಂಥಗಳನ್ನು ಸ್ಥಾಪಿಸಿದರು. ಜಗದ್ಗುರು ಶಂಕರಾರ್ಚಾರ ದಕ್ಷಿಣಾಮ್ನಾಯ ಪೀಠವಾದ ಶೃಂಗೇರಿ ಮತ್ತು ಜಗದ್ಗುರು ರಾಮಾನುಜಾಚಾರ್ಯ ವಿಶಿಷ್ಟಾದ್ವೈತ ಪ್ರಚಾರದ ಪ್ರಧಾನವಾದ ಮೇಲುಕೋಟೆ,ಜಗದ್ಗುರು ಮಧ್ವಾಚಾರ್ಯರ ದ್ವೈತ ಸಿದ್ದಂತದ ಪ್ರಧಾನ ಕೇಂದ್ರವಾದ ಉಡುಪಿಯು ಕರ್ನಾಟಕದಲ್ಲಿ ಭಕ್ತಿ, ಭಕ್ತಿಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ತಿಳಿಸಿದರು.
ಇವರೆಲ್ಲಾ ತ್ರಿಮಥಾಚಾರ್ಯರು ತಿರುಮಲ ವೆಂಕಟೇಶ್ವರನೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದರು, ಅನೇಕ ರಾಜರುಗಳು ತಿರುಮಲದ ಕಡೆಗೆ ಹೆಚ್ಚಿನ ಒಲವು ಹೊಂದಿದ್ದರು. ವಿಜಯನಗರದ ಶ್ರೀಕೃಷ್ಣದೇವರಾಯ ಮತ್ತು ಮೈಸೂರು ಮಹಾರಾಜರಂತಹ ರಾಜರುಗಳು ಶ್ರೀ ವೆಂಕಟೇಶ್ವರನ ಕಟ್ಟಾ ಭಕ್ತರಾಗಿದ್ದರು ಎಂದರು
ಟಿಟಿಡಿಯ ಭಕ್ತಿ ವಾಹಿನಿಗೆ ಅಸಂಖ್ಯಾತ ಭಕ್ತರು ಹೊಂದಿದ್ದು ಹರಿದಾಸರು ಅನೇಕ ಹಾಡು, ಕವನಗಳನ್ನು ಮತ್ತು ಸಾಹಿತ್ಯದ ಇತರ ಪ್ರಕಾರಗಳನ್ನು ಸ್ವಾಮಿಗೆ ಅರ್ಪಿಸಿದ್ದಾರೆ. ಈಗಾ ಭಕ್ತಿ ವಾಹಿನಿಯು ಎಸ್.ವಿ.ಬಿ.ಸಿ ಕನ್ನಡ ಮತ್ತು ಹಿಂದಿಯಲ್ಲಿ ಪ್ರಸಾರವಾಗುವುದರಿಂದ ಇನ್ನಷ್ಟು ಹೆಚ್ಚು ಭಕ್ತರನ್ನು ಅಕರ್ಷಿಸಲಿದೆ ಎಂದು ಹೇಳಿದರು
ಕನ್ನಡದ ಜನಪ್ರಿಯ ಹರಿದಾಸರಾದ ಪುರಂದರದಾಸ, ಕನಕದಾಸ,ವಿಜಯದಾಸ, ಪ್ರಸನ್ನ ವೆಂಕಟದಾಸ, ಜಗನ್ನಾಥದಾಸ ಮುಂತಾದವರು ಶ್ರೀವೆಂಕಟೇಶ್ವರನ ಹೆಸರಿನಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ತಿರುಮಲದ ಶ್ರೀವೆಂಕಟೇಶ್ವರ ಸ್ವಾಮಿ ಮೂರ್ತಿಯು ಸ್ವಯಂ ಉದ್ಬವಗೊಂಡ ಮೂರ್ತಿಯಾಗಿದೆ. ಸುಮಾರು ೨೮ ಸಾವಿರ ಮಂದಿ ಈ ದೇವಾಲಯದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ವಿಶ್ವದಾದ್ಯಂತ ಭಕ್ತಾದಿಗಳು ದಿನವೂಂದಕ್ಕೆ ಸುಮಾರು ೧ ಲಕ್ಷ ಮಂದಿ ಸ್ವಾಮಿಯ ದರ್ಶನವನ್ನು ಪಡೆಯಲಿದ್ದಾರೆ. ವೃದ್ದರು, ಬಾಣಂತಿಯರು, ಅಂಗವಿಕಲರಿಗೆ ನೇರ ದರ್ಶನಕ್ಕೆ ಸೌಲಭ್ಯ ಕಲ್ಪಿಸಿದೆ ಎಂದರು.
ಎಸ್.ವಿ.ಬಿ.ಸಿ. ಚಾನೆಲ್ ಮುಂದಿನ ದಿನದಲ್ಲಿ ಯೂ ಟ್ಯೂಬ್‌ಗಳಲ್ಲೂ ವೀಕ್ಷಿಸಬಹುದು. ಅಲ್ಲದೆ ನಿಮ್ಮ ಗ್ರಾಮೀಣಾ ಬಾಗದ ಧಾರ್ಮಿಕ ಕಾರ್ಯಕ್ರಮಗಳನ್ನು ಸಹ ಪ್ರಸಾರ ಮಾಡಲು ಅವಕಾಶ ಕಲ್ಪಿಸಿದೆ ಎಂದರು.