ಎಸ್‌ಬಿಐಗೆ ೧೪ಸಾವಿರ ಕೋಟಿ ರೂ. ಠೇವಣಿ

ನವದೆಹಲಿ,ಮೇ.೩೦- ದೇಶದಲ್ಲಿ ೨ ಸಾವಿರ ಮುಖಬೆಲೆಯ ನೋಟು ಚಲಾವಣೆ ಹಿಂಪಡೆದು ಬ್ಯಾಂಕ್ ಗಳಲ್ಲಿ ಠೇವಣಿ ಅಥವಾ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಎಸ್ ಬಿಐ ಇಲ್ಲಿಯವರೆಗೆ ೧೪,೦೦೦ ಕೋಟಿ ರೂಪಾಯಿ ಠೇವಣಿ ಸ್ವೀಕರಿಸಿದೆ.
ಮೇ ೨೩ ರಿಂದ ಆರಂಭವಾದ ಠೇವಣಿ ಸ್ವೀಕಾರ ಹಿನ್ನೆಲೆಯಲ್ಲಿ ಆರ್ ಬಿಐ ಗರಿಷ್ಠ ಮೌಲ್ಯದ ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಂಡಾಗಿನಿಂದ ಎಸ್ ಬಿಐ ೧೪,೦೦೦ ಕೋಟಿ ರೂ. ೨,೦೦೦ ನೋಟುಗಳನ್ನು ಠೇವಣಿಯಾಗಿ ಸ್ವೀಕರಿಸಿದೆ ಎಂದು ಎಸ್ ಬಿಐ ಅಧ್ಯಕ್ಷ ದಿನೇಶ್ ಖಾರಾ ಘೋಷಿಸಿದ್ದಾರೆ.
ಇದರ ಜೊತೆಗೆ ದೇಶಾದ್ಯಂತ ಇರುವ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗಳಿಂದ ಸುಮಾರು, “೩,೦೦೦ ಕೋಟಿ ರೂ.ಗಳನ್ನು ತನ್ನ ಶಾಖೆಯ ಜಾಲದ ಮೂಲಕ ಬ್ಯಾಂಕ್‌ನಲ್ಲಿ ವಿನಿಮಯ ಮಾಡಿಕೊಳ್ಳಲಾಗಿದೆ” ಎಂದು ಹೇಳಿದ್ದದಾರೆ.”ಹಿಂತೆಗೆದುಕೊಳ್ಳಲಾದ ಕರೆನ್ಸಿ ನೋಟುಗಳು’ ವಿನಿಮಯಕ್ಕಾಗಿ ಸೆಪ್ಟಂಬರ್ ೩೦ರ ತನಕ ದೇಶಾದ್ಯಂತ ಅವಕಾಶ ಮಾಡಿ ಕೊಡಲಾಗಿದೆ. ೨ ಸಾವಿರ ನೋಟು ಹಿಂಪಡೆದರೂ ಅವುಗಳ ಕಾನೂನು ಮಾನ್ಯತೆ ಮುಂದುವರಿಯಲಿದೆ ಎಂದು ಆರ್ ಬಿಐ ತಿಳಿಸಿದೆ.ಇದರ ಜೊತೆಗೆ ಎಸ್ ಬಿಐ ೭೫೦ ದಶಲಕ್ಷ ಡಾಲರ್ ವಿದೇಶಿ ಕರೆನ್ಸಿ ಬಾಂಡ್‌ಗಳನ್ನು ತನ್ನ ೧೦ ಶತಕೋಟಿ ಡಾಲರ್ ಗ್ಲೋಬಲ್ ಮೀಡಿಯಂ ನೋಟ್ ಕಾರ್ಯಕ್ರಮದ ಅಡಿಯಲ್ಲಿ ಗಾಂಧಿನಗರದ ಜಿಐಎಫ್ ಟಿ, ಐಎಫ್ ಎಸ್ ಸಿ ನಲ್ಲಿ ಭಾರತದ ಐಎನ್ ಎಕ್ಸ್ ಜಾಗತಿಕ ಭದ್ರತಾ ಮಾರುಕಟ್ಟೆಯಲ್ಲಿ ಪಟ್ಟಿಮಾಡಿದೆ ಎಂದು ಅವರು ತಿಳಿಸಿದ್ದಾರೆ.ರಫ್ತು-ಆಧಾರಿತ ಉತ್ಪಾದನೆಗೆ ತಳ್ಳುವಿಕೆಯೊಂದಿಗೆ ಬ್ಯಾಂಕಿನ ಅಂತರರಾಷ್ಟ್ರೀಯ ಬ್ಯಾಂಕಿಂಗ್ ವರ್ಟಿಕಲ್ ಅನ್ನು ವಿಸ್ತರಿಸುವ ವಿಶ್ವಾಸವನ್ನೂ ಇದೇ ವೇಳೆ ಎಸ್ ಭಿಐ ಅಧ್ಯಕ್ಷರು ವಿಷಾದ ವ್ಯಕ್ತಪಡಿಸಿದ್ದಾರೆ.