ಎಸ್‍ಬಿಆರ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಕಲಬುರಗಿ,ಸೆ 6:ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ತತ್ವಜ್ಞಾನಿ, ಶಿಕ್ಷಣತಜ್ಞ, ಆದರ್ಶ ಶಿಕ್ಷಕ, ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ವಿಭಾಗ ಜಂಟಿ ನಿರ್ದೇಶಕ(ಪರೀಕ್ಷಾ), ಜಿ. ಎಂ. ವಿಜಯಕುಮಾರ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ
ವಿದ್ಯಾರ್ಥಿಗಳ ಹೃದಯದಲ್ಲಿ ಶಿಕ್ಷಕನು ಉನ್ನತ ಸ್ಥಾನವನ್ನು
ಪಡೆದಿದ್ದಾನೆ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಹೆಚ್ಚು ಅಭ್ಯಾಸ
ಮಾಡಬೇಕು. ನಿರಂತರ ಅಧ್ಯಯನವುಯಶಸ್ಸಿಗೆ ಕಾರಣವಾಗುತ್ತದೆ. ಮಗುವಿನ ಸರ್ವತೋಮುಖಬೆಳವಣಿಗೆಗೆ, ಸತ್ಪ್ರಜೆಗಳ ನಿರ್ಮಾಣ, ಸ್ವಸ್ಥ ಸಮಾಜ, ಸದೃಢ ದೇಶ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದುದು. ನಮ್ಮ ದೇಶದ ಸಂಸ್ಕøತಿಯಲ್ಲಿ ವಿನಯತೆ,ವಿಧೇಯತೆ, ಪರಸ್ಪರ ಆತ್ಮೀಯತೆ ಬೆಳೆದು ಬರಲು ಗುರುಗಳು ನೀಡುವ ಸಂಸ್ಕಾರವೇ ಕಾರಣವೆಂದು ಅವರು ಹೇಳಿದರು.
ಶರಣಬಸವೇಶ್ವರವಸತಿ ಸಂಯುಕ್ತ ಪ.ಪೂ ಕಾಲೇಜುಮೇಲ್ವಿಚಾರಕಡಾ.ಶ್ರೀಶೈಲ ಜಿ ಹೊಗಡೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,
ಬೆಳಗುತ್ತಿರುವ ಜ್ಯೋತಿ ಗುರುವಿನ ಪ್ರತೀಕವಾದರೆ, ಅದರಿಂದ
ಹೊತ್ತಿಸಿಕೊಳ್ಳುವ ಇನ್ನೊಂದು ಜ್ಯೋತಿ ಶಿಷ್ಯನ ಪ್ರತೀಕವಾಗಿರುತ್ತದೆ.
ಶರಣಬಸವೇಶ್ವರ ಸಂಸ್ಥಾನದ ಅಡಿಯಲ್ಲಿ ನಡೆಯುತ್ತಿರುವ ಜ್ಞಾನ
ದಾಸೋಹ, ಅನ್ನ ದಾಸೋಹಕ್ಕೆ ಮುಂತಾದ ಸೇವಾ ಕಾರ್ಯಗಳಿಗೆ ಅಡಿಪಾಯಹಾಕಿರುವವರು ಪೂಜ್ಯ ಆದಿದೊಡ್ಡಪ್ಪ ಅಪ್ಪ ಅವರ ಗುರುಗಳಾದ
ಶರಣಬಸವೇಶ್ವರರೇ ಕಾರಣ. ಗುರು-ಶಿಷ್ಯರ ಪರಂಪರೆಗೆಶರಣಬಸವೇಶ್ವರ ಸಂಸ್ಥಾನವೇ ಸಾಕ್ಷಿ. ಎಂದು ಹೇಳಿದರು.
ಇದೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಾಯಕರನ್ನು ನೇಮಕ
ಮಾಡಲಾಯಿತು. ಈ ಸಂದರ್ಭದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.
ಬೆಳಗಿನ ತರಗತಿಗಳನ್ನು ಸೆಲ್ಫ್ ಗವರರ್ನಿಂಗ್ ಡೇ ರೂಪದಲ್ಲಿ
ಆಚರಿಸಲಾಯಿತು. ಕಾಲೇಜಿನ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳಾಗಿ,ಕಾಲೇಜಿನ ಪ್ರಾರ್ಥನೆಯ ಸಂಪ್ರದಾಯದಂತೆ ಸಂಸ್ಕøತ, ಕನ್ನಡ, ಹಿಂದಿ,ಇಂಗ್ಲಿಷ್‍ನÀಲ್ಲಿ ಶ್ಲೋಕಗಳನ್ನು ಹೇಳುವುದರ ಮೂಲಕ
ಪ್ರಾರ್ಥನೆಯನ್ನು ಮಾಡಿದರು. ವಿದ್ಯಾರ್ಥಿಗಳು ಒಂದು ದಿನದ ಶಿಕ್ಷಕರಾಗಿ
ಪಾಠ ಮಾಡಿದರು. ಉತ್ತಮ ಶಿಕ್ಷಕರಿಗೆ ಬಹುಮಾನ ನೀಡಲಾಯಿತು.
ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕ ವರ್ಗದವರು,
ಬೋಧಕೇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿಉಪಸ್ಥಿತರಿದ್ದು ಅತ್ಯಂತ ಸರಳವಾಗಿ ಆಚರಿಸಲಾಯಿತು.