ಎಸ್‍ಬಿಆರ್‍ನಲ್ಲಿ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ

ಕಲಬುರಗಿ,ಏ.27:ಕಲಬುರಗಿಯ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ವಿಶ್ವ ಪುಸ್ತಕ ದಿನಾಚರಣೆ ಹಾಗೂ ಕೃತಿಸ್ವಾಮ್ಯ (ಕಾಪಿರೈಟ್ ) ದಿನಾಚರಣೆಯನ್ನು ಸಂಸ್ಥೆಯ ವಿದ್ಯಾರ್ಥಿಗಳಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕವನಗಳು, ಲೇಖನಗಳು, ಪುಸ್ತಕ ವಿಮರ್ಶೆ, ಉಲ್ಲೇಖಗಳು ಮತ್ತು ಸಣ್ಣ ಕಥೆಗಳನ್ನು ಪ್ರಸ್ತುತಪಡಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಕಾಂತ ಪಾಟೀಲ, ಅವರು ” ಪುಸ್ತಕಗಳು ತಮ್ಮ ಬದುಕಿನಲ್ಲಿನ ದುಃಖವನ್ನು ಹೋಗಲಾಡಿಸುವ ಶಕ್ತಿ ಹೊಂದಿರುವುದರಿಂದ ವಿದ್ಯಾರ್ಥಿಗಳು ವ್ಯಾಪಕವಾದ ಓದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದಲ್ಲದೆ, ಪುಸ್ತಕಗಳು ನಾವು ಚೆನ್ನಾಗಿ ಬೆಳೆಯಲು ಸಹಾಯ ಮಾಡುತ್ತವೆ. ” ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷರಾದ ಡಾ.ಶ್ರೀಶೈಲ್ ಜಿ ಹೊಗಡೆ ಅವರು “ವಿದ್ಯಾರ್ಥಿಗಳು ನಿತ್ಯ ಓದುವುದರ ಜೊತೆಗೆ ಪುಸ್ತಕಗಳನ್ನು ಓದಬೇಕು ಎಂದು ಸಲಹೆ ನೀಡಿದರು. ಇದು ಅವರ ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯ ಮಾಡುತ್ತವೆ” ಎಂದು ಹೇಳಿದರು.

ಕಾರ್ಯಕ್ರಮದ ಪ್ರಾರ್ಥನೆಯನ್ನು ಸ್ವಾತಿ, ಕವನ ಮತ್ತು ಸಂಜನಾ ನೆರವೇರಿಸಿದರು. ಗಮನಾರ್ಹವಾದ ಉಲ್ಲೇಖಗಳನ್ನು (ಕೊಟೇಶನ್‍ಗಳು) ಸಾನಿಕಾ ಮತ್ತು ಸಂಜನಾ ಓದಿದರು. ಚಿನ್ಮಯಿ ಮತ್ತು ರಕ್ಷಿತಾ ಪುಸ್ತಕಗಳ ಪ್ರಾಮುಖ್ಯತೆ ಮತ್ತು ಓದಿನ ಮಹತ್ವದ ಬಗ್ಗೆ ಮಾತನಾಡಿದರು ಹಾಗೂ ಶ್ರೀಲಕ್ಷ್ಮಿ ಮತ್ತು ಪ್ರಾಂಜಲ್ ಶೇಕ್ಸ್‍ಪಿಯರ್ ಮತ್ತು ಸವಾರ್ಂಟೆಸ್ ಕುರಿತು ಮಾತನಾಡಿದರು. ಪ್ರೀತಿ, ಗೌರಿ ಮತ್ತು ಸಮನ್ವಿತಾ ಕವನ ವಾಚನ ಮಾಡಿದರು, ವರ್ಷಿಣಿ ಕಥೆ ಹೇಳಿದರು. ಸುಖಿ ಮತ್ತು ಅನ್ಹಾ ಪುಸ್ತಕ ವಿಮರ್ಶೆಗಳನ್ನು ಪ್ರಸ್ತುತಪಡಿಸಿದರೆ ಸಮರ್ಥ್ ಎಂ ಮತ್ತು ದೀಪಿಕಾ ತಮ್ಮ ಲೇಖನಗಳನ್ನು ಓದಿದರು. ಕಾರ್ಯಕ್ರಮಕ್ಕೆ ಲಘು ಸ್ಪರ್ಶವನ್ನು ಸೇರಿಸುವ ಮೂಲಕ ಮಿಸ್ ಲತಾ ಅಸಾಮಾನ್ಯ ಉಚ್ಚಾರಣೆಯೊಂದಿಗೆ ಪದಗಳನ್ನು ಓದಿದರು.

ಕಾರ್ಯಕ್ರಮದಲ್ಲಿ, ಕಾಲೇಜಿನ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಮರ್ಥ್ , ಶಿಬಾ ಮತ್ತು ಶಾಂಭವಿ ಕಾರ್ಯಕ್ರಮ ನಿರೂಪಿಸಿ, ಚಂದ್ರಿಕಾ ವಂದಿಸಿದರು.