ಎಸ್ಪಿ ನಿಖಿಲ್ ರಕ್ತದಾನ ಯುವಕರಿಗೆ ಮಾದರಿ

ರಾಯಚೂರು, ಆ.೧೫- ೭೬ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಕ್ರೀಡಾಂಗಣದ ಒಳಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್. ಬಿ ಅವರು ರಕ್ತದಾನ ಮಾಡಿ ಯುವಕರಿಗೆ ಮಾದರಿಯಾದರು. ರಕ್ತದಾನ ಶಿಬಿರದಲ್ಲಿ
ರಾಜ್ಯ ವೈದ್ಯಕೀಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲ್ ಅವರು ಎಸ್ ಪಿ ನಿಖಿಲ್ ಅವರನ್ನು ಶ್ಲಾಘನೆ ಮಾಡಿದರು.