ಎಸ್‌ಡಿಎಮ್‌ಸಿ ತಾಲ್ಲೂಕ ಘಟಕದ ಅಧ್ಯಕ್ಷರು- ಉಪಾಧ್ಯಕ್ಷರ ಆಯ್ಕೆ

ಸಂಜೆವಾಣಿ ವಾರ್ತೆ

ಹರಪನಹಳ್ಳಿ.ಜು.೪:-ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ವೇದಿಕೆಯಿಂದ   ಹರಪನಹಳ್ಳಿ ತಾಲೂಕು ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ತಾಲೂಕು ಅಧ್ಯಕ್ಷರಾಗಿ ಪ್ರತಾಪ್ ಚಲವಾದಿ ಹಾಗೂ ವಿಜಯನಗರ ಜಿಲ್ಲೆಯ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ಉಪಾಧ್ಯಕ್ಷರಾಗಿರುವ ಗಿನ್ನಳ ರಾಘವೇಂದ್ರ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಶಾಲಾ ಅಭಿವೃದ್ಧಿ ಮೇಲುಸ್ತುವರಿ ಸಮನ್ವಯ ಸಮಿತಿ ವೇದಿಕೆಯ ಪದಾಧಿಕಾರಿಗಳ ನೇಮಕ ಕುರಿತು ಸಭೆಯಲ್ಲಿ ಗುಣಾತ್ಮಕ ಶಾಲಾ ಶಿಕ್ಷ ಣ ಸಾರ್ವತ್ರೀಕರಣ ಪ್ರಕ್ರಿಯೆಯ ನಮ್ಮ ಈ ಪಯಣದಲ್ಲಿ ಅವರನ್ನು ಗಣನೆಗೆ ತೆಗೆದುಕೊಂಡು ಕರದೊಯ್ಯುವ ‘ಸಂಕಲ್ಪ’ ನಮ್ಮದಾಗಬೇಕು.ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ದೃಷ್ಟಿಯಿಂದ ನಮ್ಮ ಸಮುದಾಯವೆಂದರೆ ಅವಿದ್ಯಾವಂತ, ಅರೆವಿದ್ಯಾವಂತ, ಕಡುಬಡವ, ಕೂಲಿಕಾರರ ಸಮುದಾಯ. ಅವರಜೊತೆ ನಾವು ಹೊಂದಿಕೊಳ್ಳಲೇಬೇಕು. ಅವರನ್ನು ನಮ್ಮೊಂದಿಗೆ ಕೊಂಡೊಯ್ಯಲೇ ಬೇಕು  ಇರುವ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ಪರಿಸ್ಥಿತಿಯನ್ನು ಮತ್ತಷ್ಟು ಸುಧಾರಿಸುವ ಕೆಲಸವಾಗಬೇಕೆ ಹೊರತು ವಿದ್ಯಾವಂತ, ಹಣವಂತ ಮತ್ತು ನಯ-ನಾಜೂಕಿನ ಸಮುದಾಯಕ್ಕಾಗಿ ಪರಿತಪಿಸುತ್ತಾ ಕೂರುವುದು ಸರಿಯಲ್ಲ.ಎಂದು ವಿಜಯನಗರ ಜಿಲ್ಲೆಯ ಉಪಾಧ್ಯಕ್ಷರಾಗಿರುವ ಗಿನ್ನಾಳ ರಾಘವೇಂದ್ರ ಅವರು ಹೇಳಿದರು.

.