ಎಸ್ಟಿ ಸೇರ್ಪಡೆಗೆ ಒತ್ತಾಯಿಸಿ ಹಾಲುಮತ ಸಮುದಾಯದಿಂದ ಪ್ರತಿಭಟನೆ..

ಸಿರಿಗೇರಿ:ಜ,05 : ಹಾಲುಮತ ಸಮುದಾಯವನ್ನು ವಾಲ್ಮೀಕಿ ಸಮುದಾಯಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ಸಿರಿಗೇರಿ ವ್ಯಾಪ್ತಿಯ ಕುರುಬ ಸಮುದಾಯದವರು ಸೋಮವಾರ ಸಿರಿಗೇರಿ ಮುಖ್ಯ ವೃತ್ತದಲ್ಲಿ ಜಯಘೋಷ ಕೂಗಿ ಸೋಮವಾರ ಸಿಂಧನೂರಿಗೆ ತೆರಳಿದರು. ಈ ಸಂಧರ್ಭದಲ್ಲಿ ಮಾತನಾಡಿದ ಹಾಲುಮತ ಸಮುದಾಯದ ಮುಖಂಡರಾದ ಮುದ್ದಟನೂರು ಹೊಸೂರಪ್ಪ ಹಾಗೂ ರಾಘವೇಂದ್ರ ಕಾಡು ಕುರುಬ, ಕಾಡುಸಿಧ್ಧ, ಜೇನು ಕುರುಬ, ಹಾಲುಮತ ಎನಿಸಿಕೊಂಡ ನಾವು ಇಂದಿನವರೆಗೂ ನಿಕೃಷ್ಟ ಜೀವನ ನಡೆಸುತ್ತಿದ್ದೇವೆ. ಜೇನು ಕುರುಬ ಎನಿಸಿಕೊಂಡ ಮೈಸೂರು ಭಾಗದ ಕುರುಬರು ಅಡವಿಯಲ್ಲಿ ಜೀವಿಸುತ್ತಿದ್ದಾರೆ. ಕಳೆದ 1976ರಲ್ಲಿ ಎಸ್ಟಿ ಸಮುದಾಯಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಅಂದಿನ ದೇವರಾಜು ಅರಸು ಅಂಗೀಕರಿಸಿದ್ದಾರೆ. ಆದರೆ ಇಂದಿನವರೆಗೂ ಜಾರಿಗೆ ಬಂದಿಲ್ಲ. ಎಸ್ಟಿ ಸಮುದಾಯಕ್ಕೆ ಹಾಲುಮತ ಸಮಾಜವನ್ನು ಸೇರ್ಪಡೆ ಮಾಡುವವರೆಗೆ ನಿರಂತರ ಹೋರಾಟ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಹಾಲುಮತ ಸಮುದಾಯದ ಪ್ರಮುಖರಾದ ಮಾಜಿ ತಾಪಂ ಅಧ್ಯಕ್ಷ್ಯ ಮುದ್ದುವೀರಪ್ಪ, ಡಾ:ತಿಪ್ಪಯ್ಯ, ಇಟಗಿ ಬಿಳಿಕಲ್ಲಪ್ಪ, ರಾಜಶೇಖರ, ದೊಡ್ಡ ಬಸಪ್ಪ, ಕೆ.ರಂಗಪ್ಪ, ಲಿಂಗಪ್ಪ, ಮುದೆಪ್ಪ, ಚಂದ್ರಶೇಖರ ಸೇರಿದಂತೆ ಹಾಲುಮತ ಸಮುದಾಯದ ಸುಮಾರು ನೂರಾರು ಜನರ ನಿಯೋಗ ಮುಖ್ಯ ಮಂತ್ರಿ ಬಳಿ ತೆರಳಿದರು.