ಎಸ್‌ಟಿ ಮೀಸಲಾತಿ ಪಾದಯಾತ್ರೆಗೆ ಕೆ.ಪಿ. ನಂಜುಂಡಿ ಆಗಮನ

ರಾಯಚೂರು,ಜ.೯- ವಿಶ್ವಕರ್ಮರನ್ನು ಎಸ್‌ಟಿ ಮೀಸಲಾತಿಗೆ ಸೇರಿಸಲು ಒತ್ತಾಯಿಸಿ ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಪಾದಯಾತ್ರೆಯನ್ನು ಲಿಂಗಸ್ಗೂರಿನಿಂದ ರಾಯಚೂರುವರೆಗೆ ಹಮ್ಮಿಕೊಂಡಿದ್ದು ಎಸ್‌ಟಿ ಮೀಸಲಾತಿಗಾಗಿ ಪಾದಯಾತ್ರೆಗೆ ಕೆ.ಪಿ.ನಂಜುಂಡಿ ಆಗಮಿಸಲಿದ್ದಾರೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಯಚೂರು ಜಿಲ್ಲಾಧ್ಯಕ್ಷ ಮಾರುತಿ ಬಡಿಗೇರ್ ತಿಳಿಸಿದರು.
ಇದೇ ೧೦ ಮಂಗಳವಾರ ರಾಯಚೂರು ನಗರದಲ್ಲಿ ಮಧ್ಯಾಹ್ನ ೨ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಮನವಿ ಪತ್ರವನ್ನು ನೀಡಲು ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಅಧ್ಯಕ್ಷರಾದ ಕೆ.ಪಿ. ನಂಜುಂಡಿ ಮಂಗಳವಾರ ದಿನ ಬೆಳಗ್ಗೆ ೧೧ ಗಂಟೆಗೆ ಅವರು ಸಹ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶ್ವಕರ್ಮ ಮಕ್ಕಳ ವಿಶ್ವಕರ್ಮ ಅವರ ಮಕ್ಕಳ ಭವಿಷ್ಯಕ್ಕಾಗಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದು, ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕು ಮತ್ತು ರಾಜ್ಯದ ಮೂಲೆ ಮೂಲೆಯಿಂದ ಪ್ರತಿ ಜಿಲ್ಲೆಯಿಂದ ಸಾಕಷ್ಟು ಜನ ವಿಶ್ವಕರ್ಮರು ನಾಳೆ ಭಾಗವಹಿಸಲಿದ್ದಾರೆ.
ರಾಜ್ಯ ಯುವ ಅಧ್ಯಕ್ಷ ಶ್ರೀನಿವಾಸ್ ಮಳವಳ್ಳಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಲೋಹಿತ್ ಕಲ್ಲೂರ್, ಬ್ರಹ್ಮ ಗಣೇಶ್ ವಕೀಲ, ಸೋಮಣ್ಣ ಸುಕಲಾಪೇಟೆ, ಪ್ರಧಾನ ಕಾರ್ಯದರ್ಶಿ ಕೆ.ರಾಮು ಗಾನಧಾಳ, ಮನೋಹರ ಬಡಿಗೇರ್, ಯಾದಗಿರಿ ಜಿಲ್ಲಾಧ್ಯಕ್ಷ ಆನಂದ ಲಕ್ಷ್ಮಿಪುರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೌನೇಶ್ ಗೊನವರ, ಇಲ್ಲ ಯುವಾ ಅಧ್ಯಕ್ಷ ವಿಜಯ ಬಡಿಗೇರ್, ಜಿಲ್ಲಾ ಮಹಿಳಾ ಅಧ್ಯಕ್ಷ ಮಂಜುಳಾ ಬಡಿಗೇರ್, ಕಾಳಪ್ಪ ಮಸ್ಕಿ, ಸುರೇಶ್ ಸಂಗಾಪುರ್, ಶ್ರೀಧರ್, ರಘು ಉಟ್ಕೋರ್, ಧರ್ಮಣ್ಣ, ಕಾಶೀಪತಿ ಜವಳಗೇರಿ, ಕಾಳಪ್ಪ ಅಥಣಿ ಇನ್ನಿತರರು ಭಾಗವಹಿಸಿದ್ದರು.