ಸಂಜೆವಾಣಿ ವಾರ್ತೆ
ಕುಕನೂರು, ಜು.23: ಕನಾ೯ಟಕ ರಾಜ್ಯದಲ್ಲಿ ಕೋಲಿ, ಕಬ್ಬಲಿಗ ಸೇರಿ ೩೭ ಉಪ ಪಂಗಡಗಳಿಗೆ ಎಸ್ಟಿ ಮೀಸಲು ನೀಡುವಂತೆ ಆಗ್ರಹಿಸಿ ಆ.೧೮ ರಂದು ಮಧ್ಯ ಕನಾ೯ಟಕ ಭಾಗದ ಕೇಂದ್ರ ಸ್ಥಳವಾದ ಕೊಪ್ಪಳ ದಲ್ಲಿ ಲಕ್ಷಾಂತರ ಜನರ ಸಮ್ಮುಖ ದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳ ಲಾಗಿದೆ ಎಂದು ಕೋಲಿ, ಕಬ್ಬಲಿಗ ,ಅಂಬಿಗ ಸಮಾಜದ ರಾಜ್ಯ ಯುವ ಘಟಕದ ಅಧ್ಯಕ್ಷ ಶಿವಾಜಿ ಮೇಟೆಗಾರ್ ಹೇಳಿದರು. ಅವರು ಪಟ್ಟಣದಲ್ಲಿ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದರು. ಮಹತ್ವದ ವಿಷಯವದ ಪರಿಶಿಷ್ಟ ಪಂಗಡಕ್ಕೇ ಸೇರಿಸಬೇಕು ಎಂಬ ಆಶೆಯನ್ನು ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರು ಆಶ್ವಾಸನೆ ನೀಡಿದ್ದರು ಆದರೇ ಇಲ್ಲಿಯವರೆಗೆ ಯಾವುದೇ ಕ್ರಮ ತಗೆದುಕೊಂಡಿಲ್ಲ ಕೇಂದ್ರ ಸರ್ಕಾರ ವಿಳಂಬ ನೀತಿ ಯನ್ನು ಖಂಡಿಸಿ ಅ,೧೮ ಕ್ಕೆ ಕೊಪ್ಪಳದಲ್ಲಿ ಪ್ರತಿಭಟನೆ ಮಾಡಲಾಗುವದು ಇದರಲ್ಲಿ ಸುಮಾರು ಮಧ್ಯ ಕರ್ನಾಟಕದಲ್ಲಿ ಗಂಗಾಮತ ಸಮಾಜ ಒಗ್ಗೂಡಿಗಾಗಿ ಈ ಪ್ರತಿಭಟನೆ ಅದಕ್ಕಾಗಿ ನಮ್ಮ ಹಕ್ಕನ್ನು ನಾವು ಪಡೆಯುತ್ತೇವೆ ಇದರಲ್ಲಿ ಸುಮಾರು ೫೦ ರಿಂದ ೬೦ ಸಾವಿರ ಜನಸಂಖ್ಯೆ ಸೇರುವ ಸಾಧ್ಯತೆ ಇದೆ. ಇದೆ ಎಂದು ತಿಳಿಸಿದರು.ರಾಜ್ಯದಲ್ಲಿ ನಮ್ಮ ಜನರು ಇನ್ನೂ ಕಾಡು ಬೆಟ್ಟಗಳಲ್ಲಿ ನೆಲೆಸಿ ಜೀವನ ಸಾಗಿಸುವ ಕೆಳ ಹಂತಲ್ಲಿದ್ದಾರೆ, ಸಮಾಜ ಮುಖ್ಯ ವಾಹಿನಿಗೆ ಬರಬೇಕಾದರೆ ಎಸ್ಟಿ ಮೀಸಲು ಅಗತ್ಯವಿದೆ, ಕಳೆದ ಬಾರಿ ಮಲ್ಲಿಕಾಜು೯ನ ಖಗೆ೯ ಅವರು ಮೀಸಲು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡದ ಪರಿಣಾಮ ನಮ್ಮ ಸಮಾಜ ಕಲಬುರ್ಗಿ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಕಾಂಗ್ರೆಸ್ ತಿರಸ್ಕರಿಸಿ ಬಿಜೆಪಿ ಬೆಂಬಲಿಸಬೇಕು ಎಂದು ನಿಧಾ೯ರ ಮಾಡಿ ಉಮೇಶ್ ಜಾಧವ ಅವರ ಗೆಲುವಿಗೆ ಕಾರಣ ವಾಯಿತು ಎಂದು ತಿಳಿಸಿದರು.ಇದೆ ರೀತಿ ಬಿಜೆಪಿ ಅವರು ಮಾಡಿದರೆ ಅವರಿಗೂ ಬರುವ ಚುನಾವಣೆ ಯಲ್ಲಿ ತಕ್ಕ ಪಾಠ ಗ್ಯಾರಂಟಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ , ಶಿವಪುತ್ರಪ್ಪ ಮಡ್ಡಿ, ಬಾಳಪ್ಪ ಬಾರಕೇರ, ರಾಮಣ್ಣ ಬಾರಕೇರ, ಮಂಜುನಾಥ್ ಬಾರಕೇರ, ಬುಡ್ದ ಪ್ಪೆ ಬಾರಕೇರ,ರಾಮು ಕೌದಿ ಇತರರು ಇದ್ದರು.