ಎಸ್ಟಿಗೆ ರಾಜಕೀಯ ಮೀಸಲು ನೀಡಿದ್ದು ಕಾಂಗ್ರೆಸ್

ಹೊಳಲ್ಕೆರೆ, ಅ.31: ರಾಮಾಯಾಣ ಮಹಾಕಾವ್ಯ ಬರೆದು ಶ್ರೀರಾಮ, ಸೀತೆ, ಲಕ್ಷ÷್ಮಣ, ಹನುಮಂತ ಅವರ ಮೂಲಕ ನಾಡಿಗೆ ಆದರ್ಶಗಳ ಸಂದೇಶ ನೀಡಿದ ಮಹರ್ಷಿ ವಾಲ್ಮೀಕಿ ವಿಶ್ವದ ಮಹಾಕವಿ ಎಂದು ಮಾಜಿ ಸಚಿವ ಎಚ್.ಆಂಜನೇಯ ಬಣ್ಣಿಸಿದರು.ಚಿಕ್ಕಜಾಜೂರು ಸಮೀಪದ ಚಿಕ್ಕಂದವಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಶ್ರೀರಾಮ ಇದ್ದಲ್ಲಿ ವಾಲ್ಮೀಕಿ ಇರಲೇಬೇಕು. ಆಗ ಮಾತ್ರ ಶ್ರೀರಾಮನಿಗೆ ನಾವು ಗೌರವಿಸಿದಂತೆ. ಆದ್ದರಿಂದ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತಿರುವ ಶ್ರೀರಾಮ ಮಂದಿರದಲ್ಲಿ ವಾಲ್ಮೀಕಿ ಪ್ರತಿಮೆ ನಿರ್ಮಾಣ ಕಾರ್ಯ ಆಗಲೇಬೇಕು. ಈ ಮೂಲಕ ಮಹಾಕವಿಗೆ ಗೌರವ ಸಲ್ಲಿಸಬೇಕು ಎಂದು ಆಗ್ರಹಿಸಿದರು.ಶ್ರೀರಾಮ, ಸೀತಾಮಾತೆಯನ್ನು ಕಾಡಿಗೆ ಕಳುಹಿಸಿದಾಗ ಆ ಮಹಾತಾಯಿಗೆ ಆಶ್ರಯ ನೀಡಿ, ಇಬ್ಬರು ಮಕ್ಕಳ ಜನನದ ಬಳಿಕ ಸೀತಾಮಾತೆಯನ್ನು ಆರೈಕೆ ಮಾಡಿದ ವಾಲ್ಮೀಕಿ ನಾಡಿನ ಶ್ರೇಷ್ಠ ಮಾನವತಾವಾದಿ ಆಗಿದ್ದಾರೆ ಎಂದರು.ಪರಿಶಿಷ್ಟ ಪಂಗಡಕ್ಕೆ ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರದ ಮೀಸಲಾತಿ ಇತ್ತು. ಇದನ್ನು 2008ರಲ್ಲಿ ಹದಿನೈದು ಸ್ಥಾನಕ್ಕೆ ಹೆಚ್ಚಿಸಿ, ರಾಜಕೀಯ ಮೀಸಲಾತಿ ನೀಡಿದ್ದು ಕಾಂಗ್ರೆಸ್ ಪಕ್ಷ ಎಂದರು.ಪ್ರಸ್ತುತ ಎಸ್ಸಿ, ಎಸ್ಡಿ ಮೀಸಲಾತಿ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಇದು ಸ್ವಾಗತಾರ್ಹ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಾಗಮೋಹನ್ ದಾಸ್ ವರದಿ ಜಾರಿಗೆ ಚಿಂತನೆ ನಡೆಸಿತ್ತು. ಆದರೆ, ಚುನಾವಣೆ ಘೋಷಣೆ ಆಗಿದ್ದರಿಂದ ಸಾಧ್ಯವಾಗಿರಲಿಲ್ಲ. ಮತ್ತೊಮ್ಮೆ ಅಧಿಕಾರ ಸಿಕ್ಕಿದ್ದರೆ ಮೀಸಲಾತಿ ಹೆಚ್ಚಳಕ್ಕೆ ಕ್ರಮಕೈಗೊಳ್ಳಲಾಗಿತ್ತಿತ್ತು. ಆದರೆ ಅಧಿಕಾರ ಕೈ ತಪ್ಪಿ ಹೋಯಿತು. ಆದರೂ ಕೂಡ ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ನಿರಂತರ ಒತ್ತಡ ತಂದಿದ್ದರಿAದ, ಅದರಲ್ಲೂ ವಾಲ್ಮೀಕಿ ಶ್ರೀಗಳ ಬದ್ಧತೆಯ ಹೋರಾಟಕ್ಕೆ ಮಣಿದು ಸರ್ಕಾರ ಕ್ರಮ ಕೈಗೊಂಡಿದೆ ಎಂದರು.ಆದರೆ, ಈ ಮೀಸಲಾತಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ದೊರೆಯಬೇಕಾದರೆ ರಾಷ್ಟçಪತಿ ಅಂಕಿತ ಬೇಕು. ಕೂಡಲೇ ಈ ಆಜ್ಞೆ ಆಗಬೇಕು. ಮೀಸಲಾತಿ ಹೆಚ್ಚಳ ಜಾರಿಗೆ ಬರುವವರೆಗೆ ಉದ್ಯೋಗ ನೇಮಕಾತಿ ಪ್ರತಿಕ್ರಿಯೆ ರದ್ದುಗೊಳಿಸಬೇಕು. ಈಗ 600 ಇಂಜಿನಿಯರ್ ಹುದ್ದೆಗಳ ನೇಮಕಾತಿಗೂ ತಡೆ ಹಾಕಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯರಾದ ಎಂ.ಜಿ.ಲೋಹಿತ್‌ಕುಮಾರ್, ಎಸ್.ಜೆ.ರಂಗಸ್ವಾಮಿ, ನರಸಿಂಹಮೂರ್ತಿ, ತಾ.ಪಂ.ಮಾಜಿ ಸದಸ್ಯರಾದ ಪುಟ್ಟಣ್ಣ ಚಿಕ್ಕಜಾಜೂರು, ಚಿತ್ರದುರ್ಗ ಬೋವಿ ಸಮಾಜದ ಜಿಲ್ಲಾಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ, ಹೊಳಲ್ಕೆರೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಹೊಳಲ್ಕೆರೆ ಮದಕರಿ ಯುವಸೇನೆ ಅಧ್ಯಕ್ಷ ರಾಜಪ್ಪ, ಚಿಕ್ಕಾಜಾಜೂರು ಗ್ರಾಮ ಪಂಚಾಯಿತಿ ಸದಸ್ಯ ಸಿದ್ದೇಶ್, ಕಾಂಗ್ರೆಸ್ ಯುವ ಮುಖಂಡ ಅಭಿಷೇಕ್ ತಿಪ್ಪೇಸ್ವಾಮಿ, ಮಲ್ಲೇಶ್, ಪಿ.ಕೆ.ಪವನ್, ಕುಮಾರ, ವಿಕ್ರಂ ನಾಯಕ, ಓಬಣ್ಣ, ಲೋಕೇಶ್, ಅಣ್ಣಪ್ಪ, ಶಿವಣ್ಣ, ಓಬಳೇಶ್, ರಾಘವೇಂದ್ರ ಉಪಸ್ಥಿತರಿದ್ದರು.