ಎಸ್‌ಜಿಪಿಯು ಕಾರ್ಯಗಾರ

ಕೆ.ಜಿ.ಎಫ್.,ಆ,೨೦:ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕದ (ಎಸ್.ಜೆ.ಪಿ.ಯು) ಕಾರ್ಯಗಾರ ಸಭೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಧಾನ ಜೆ.ಎಂ.ಎಫ್.ಸಿ ಕೆ.ಜಿ.ಎಫ್ ಹಾಗೂ ಅಧ್ಯಕ್ಷರು, ಬಾಲನ್ಯಾಯ ಮಂಡಳಿ, ಕೆ.ಜಿ.ಎಫ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು,
ಸಭೆಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕದ ನೋಡಲ್ ಅಧಿಕಾರಿ ಹಾಗೂ ಡಿ.ವೈಎಸ್.ಪಿ ಕೆ.ಜಿ.ಎಫ್., ಬಾಲನ್ಯಾಯ ಮಂಡಳಿ ಸದಸ್ಯರು, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಸರ್ಕಾರಿ ಬಾಲಕ ಮತ್ತು ಬಾಲಕಿಯರ ಬಾಲ ಮಂದಿರಗಳ ಅಧೀಕ್ಷಕರು, ಪ್ಲೇಸ್ ಆಫ್ ಸೇಫ್ಟಿ ಅಧೀಕ್ಷಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸದಸ್ಯರು ಮತ್ತು ಮಕ್ಕಳ ವಿಶೇಷ ಪೊಲೀಸ್ ಘಟಕದ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು.
ನ್ಯಾಯಾಧೀಶರು ಜೆ.ಜೆ. ಕಾಯ್ದೆಯ ಪ್ರಕಾರ ಮಕ್ಕಳ ಪ್ರಕರಣಗಳ ತನಿಖೆಯನ್ನು ಕೈಗೊಳ್ಳಬೇಕೆಂದು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಎಲ್ಲಾರೂ ಕೈಜೋಡಿಸಿ ಪ್ರಮಾಣಿಕ ಪ್ರಯತ್ನದಿಂದ ಮಕ್ಕಳಿಗೆ ನ್ಯಾಯ ಒದಗಿಸಬೇಕೆಂದು ತಿಳಿಸಿದರು.