ಎಸ್ಕಲೇಟರ್ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.25: ಇಲ್ಲಿನ  ರೈಲ್ವೆ ನಿಲ್ದಾಣದಲ್ಲಿ ಎಸ್ಕಲೇಟರ್  ಕಾಮಗಾರಿಯನ್ನು ಬೇಗನೆ ಮುಗಿಸಿ ಜನತೆಗೆ ಅನುಕೂಲ ಮಾಡಿಕೊಡಲು  ರೈಲ್ವೇ ಕ್ರಿಯಾ ಸಮಿತಿ ಒತ್ತಾಯಿಸಿದೆ.
ಸಮಿತಿಯ ಅಧ್ಯಕ್ಷ ಕೆ. ಎಂ. ಮಹೇಶ್ವರ್ ಸ್ವಾಮಿ ನೇತೃತ್ವದಲ್ಲಿ ಇಂದು  ಪದಾಧಿಕಾರಿಗಳಾದ ಜಿ. ರಾಮಚಂದ್ರಯ್ಯ, ಕೋಳೂರು ಚಂದ್ರಶೇಖರಗೌಡ, ಎಚ್.ಕೆ. ಗೌರಿಶಂಕರ, ಬಿ.ಎಂ. ಎರಿಸ್ವಾಮಿ,  ಶ್ರೀನಿವಾಸ್ ಪಾಟೀಲ್ ಹಾಗೂ ವಿಶ್ರಾಂತ ಸ್ಟೇಷನ್ ಮ್ಯಾನೇಜರ್ ಎ. ಆರ್. ಜಿ. ರೆಡ್ಡಿ ಇವರ  ರೈಲ್ವೇ ಸ್ಟೇಷನ್ ಮ್ಯಾನೇಜರ್  ನಾಗೇಶ್ ಬಾಬು ಶರ್ಮ ಹಾಗೂ ಎಲೆಕ್ಟ್ರಿಕಲ್ ಸೀನಿಯರ್ ಸೆಕ್ಷನ್ ಇಂಜಿನಿಯರ್  ರಾಜ ನಾಯಕ್ ಅವರನ್ನು ಭೇಟಿಯಾಗಿ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ಒಂದು ಮತ್ತು ಎರಡರಲ್ಲಿ ನಡೆಯುತ್ತಿರುವ     ಎಸ್ಕಲೇಟರ್ ಕೆಲಸವನ್ನು ವೀಕ್ಷಿಸಿ  ಕಾಮಗಾರಿಯ ಬಗ್ಗೆ ಚರ್ಚಿಸಿ
ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
2023  ರ ಜನವರಿ ತಿಂಗಳಿನಲ್ಲಿ ಚೆನ್ನೈನ ಜಾನ್ಸನ್ ಕಂಪನಿಯವರಿಗೆ 2 ಪ್ಲಾಟ್ಫಾರಂ ಗಳಿಗೆ ಎಸ್ಕುಲೇಟರ್ ಅಳವಡಿಸಲು  ರೂಪಾಯಿ 44,06,670 ಹಣವನ್ನು ಹಾಗೂ ಸಿವಿಲ್ ಕಾಮಗಾರಿಗಳಿಗಾಗಿ 18 ಲಕ್ಷ ನಿಗಧಿಪಡಿಸಿ ಕಾಮಗಾರಿಯನ್ನು  ಜೂನ್ ಕಳೆದ ತಿಂಗಳ ಮುಗಿಸಲು ಸೂಚಿಸಲಾಗಿತ್ತು. ಆದರೆ ಇನ್ನೂ ಆಗಿಲ್ಲ.
ಪ್ರತಿನಿತ್ಯ ಅಂದಾಜು 50 ರೈಲು ಸಂಚರಿಸುವ ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿಪ್ರಯಾಣಿಕರು ಪ್ಲಾಟ್ಫಾರ್ಮ್ ಒಂದು ಮತ್ತು ಎರಡಕ್ಕೆ ಹೋಗಿ ಬರಲು  ಆದಷ್ಟು ಬೇಗನೆ ಸ್ವಯಂ ಚಾಲಿತ ವಿದ್ಯುತ್ ಮೆಟ್ಟಲುಗಳ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರಯಾಣಿಕರಿಗೆ ಇದರ ಸೇವೆಯನ್ನು ಒದಗಿಸುವಂತೆ ಕೋರಿದರು.
ಮುಂದಿನ ತಿಂಗಳ ಅಂತ್ಯದೊಳಗೆ ಕಾಮಗಾರಿ ಮುಗಿದು ಜನರ ಸೇವೆಗೆ ಒದಗಿಸಲಿದೆಂದು ಅಧಿಕಾರಿಗಳು ಭರವಶೆ ನೀಡಿದ್ದಾರೆಂದು ಮಹೇಶ್ವರ ಸ್ವಾಮಿ ತಿಳಿಸಿದ್ದಾರೆ.