ಎಸ್‍ಓಪಿ ನಿಯಮಗಳ ಪ್ರಕಾರ ಬ್ಯಾಂಕುಗಳುಹಣವನ್ನು ವರ್ಗಾಯಿಸಬೇಕು:ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಬೀದರ,ಎ.1: ಜಿಲ್ಲೆಯಲ್ಲಿ ರಾಜ್ಯ ಸಾರ್ವತ್ರಿಕ ವಿಧಾನಸಭೆ-2023 ರ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಬೀದರ ಜಿಲ್ಲೆಯ ಬ್ಯಾಂಕುಗಳು ಎಸ್‍ಓಪಿ ನಿಯಮಗಳ ಪ್ರಕಾರ ಹಣವನ್ನು ವರ್ಗಾಯಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಬ್ಯಾಂಕಿನ ಅಧಿಕಾರಿಗಳಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ಯಾವುದೇ ಬ್ಯಾಂಕಿನಿಂದ ಹಣವನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೊಗುವಂತೆ ತಮ್ಮ ಸಂಬಂಧಿಸಿದ ಬ್ಯಾಂಕಿನವರಿಗೆ ತಿಳಿಸಬೇಕು. ಹಣವನ್ನು ಹಗಲಿನಲ್ಲಿ ಮಾತ್ರ ವರ್ಗಾಯಿಸಬೇಕು, ರಾತ್ರಿ ಸಮಯದಲ್ಲಿ ಹಣಕಾಸಿನ ವ್ಯವಹಾರ ನಡೆಯದಂತೆ ನೋಡಿಕೊಳ್ಳಬೇಕು. 10 ಲಕ್ಷಕ್ಕಿಂತ ಹೆಚ್ಚಿನ ಹಣ ತಮ್ಮ ಬ್ಯಾಂಕಿನಲ್ಲಿ ಡಿಪಾಜಿಟ್ ಮಾಡವುದು ಮತ್ತು ವಿತ್ತಡ್ರಾ ಮಾಡಿಕೊಳ್ಳುವ ಗ್ರಾಹಕರ ಮಾಹಿತಿಯನ್ನು ಡಿಓ ಮತ್ತು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರಬೇಕು, ಇದರ ಹೊರತಾಗಿ ಯಾವುದೇ ಸಂಶಯಾಸ್ಪದ ಹಣ ಕಂಡುಬಂದರೆ ನಮ್ಮ ಗಮನಕ್ಕೆ ತರಬೇಕೆಂದು ಹೇಳಿದರು.

ತಮ್ಮ ಬ್ಯಾಂಕಿನ ಹಣ ವರ್ಗಾವಣೆಯು ಎಸ್‍ಓಪಿ ಪ್ರಕಾರವೇ ಮಾಡಿದರೆ ಯಾರು ಹಿಡಿಯುವುದಿಲ್ಲ, ದಾಖಲಾತಿ ಇಲ್ಲದ ಹಣವನ್ನು ಸಂಶಯಾಸ್ಪದ ರೀತಿಯಲ್ಲಿ ಕಂಡುಬರುತ್ತದೆ. ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ಮತ್ತು ಎಟಿಎಮ್‍ಗೆ ಹಣ ವರ್ಗಾವಣೆ ಸಂದರ್ಭದಲ್ಲಿ ನಿಯಮಗಳನ್ನು ಪಾಲಿಸಬೇಕು. 10 ಲಕ್ಷಕ್ಕಿಂತ ಹೆಚ್ಚಿನ ಹಣದ ವರ್ಗಾವಣೆ ಮತ್ತು ವಿತ್ತಡ್ರಾ ಮಾಡದಂತೆ ತಮ್ಮ ಬ್ಯಾಂಕಿನ ಗ್ರಾಹಕರ ಗಮನಕ್ಕೆ ತರಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಚನ್ನಬಸವಣ್ಣ ಎಸ್.ಎಲ್., ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ, ಡಿಸಿಸಿ ಬ್ಯಾಂಕಿನ್ ಎಂ.ಡಿ.ಮಹಾಜನ್, ನಬಾರ್ಡ ಬ್ಯಾಂಕಿನ್ ಜಿಲ್ಲಾ ವ್ಯವಸ್ಥಾಪಕರಾದ ರಾಮರಾವ, ಲೀಡ್ ಬ್ಯಾಂಕಿನ ವ್ಯವಸ್ಥಾಪಕರಾದ ಸಂಜೀವ, ಜಿಲ್ಲೆಯ 20 ಬ್ಯಾಂಕಿನ ಪ್ರತಿನಿಧಿಗಳು ಭಾಗವಹಿಸಿದ್ದರು.