
ಬಂಗಾರಪೇಟೆ,ಆ.೧೩-ಎಸ್‌ಐಬಿಎಸ್ ವಿಶ್ವದಾದ್ಯಂತ ಆಧ್ಯಾತ್ಮಿಕ ಮನೋಭಾವನೆಯೊಂದಿಗೆ ಶಾಂತಿ ಸಂದೇಶವನ್ನು ಸಾರುತ್ತಿದೆ. ಬಂಗಾರಪೇಟೆಯಲ್ಲಿ ೧೯೩೭ರಲ್ಲಿ ಸ್ಥಾಪನೆಯಾಗಿ ಆಧ್ಯಾತ್ಮಿಕ ಮಾನವೀಯ ಸೇವೆಗಳ ಜೊತೆಯಲ್ಲಿ ಇಡೀ ವಿಶ್ವಕ್ಕೆ ಆಧ್ಯಾತ್ಮಿಕ ಮತ್ತು ಶಾಂತಿಯನ್ನು ಪಸರಿಸುವ ನಿಟ್ಟಿನಲ್ಲಿ ಅನೇಕ ಕ್ರೈಸ್ತ ಆಧ್ಯಾತ್ಮಿಕ ಗುರುಗಳನ್ನು ಸೃಷ್ಠಿಸುತ್ತಾ ಸಮಾಜಕ್ಕೆ ಭ್ರಾತೃತ್ವದ ಸಂದೇಶವನ್ನು ಸಾರುತ್ತಾ ಬಂದಿದೆ. ಆದರೆ ಇತ್ತೀಚೆಗೆ ಹಳೆ ವಿದ್ಯಾರ್ಥಿಗಳ ಸಂಘ ಸಂಸ್ಥೆಯ ವಿರುದ್ದ ನಿರಾದಾರ ಆರೋಪಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸುವ ಚಿಂತನೆಯನ್ನು ಮಾಡಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಸಾಮುವೇಲ್ ಜಾರ್ಜ್ ತಿಳಿಸಿದರು.
ಪಟ್ಟಣದ ಹೊರವಲಯದ ಆನಂದಗಿರಿಯಲ್ಲಿರುವ ಎಸ್‌ಐಬಿಎಸ್ ಸಂಸ್ಥೆಯಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ನಿಕಟಪೂರ್ವ ಪ್ರಾಂಶುಪಾಲರಾದ ಡಾ.ಬಾಲನ್‌ರವರ ಷಡ್ಯಂತರದಿಂದ ಹಳೇ ವಿದ್ಯಾರ್ಥಿಗಳ ಸಂಘವು ಅನಗತ್ಯವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ಒಂದು ವೇಳೆ ಅವರ ಆರೋಪಗಳು ಸತ್ಯವಾಗಿದ್ದೇ ಆದ್ದಲ್ಲಿ, ಆ ಅವಧಿಯಲ್ಲಿಯೇ ಹೊರತು ನಮ್ಮ ಅವಧಿಯಲ್ಲಿ ಅಲ್ಲ, ಆಗ ಅವರೇ ಪ್ರಾಂಶುಪಾಲರಾಗಿದ್ದರೂ ಸಹ ಯಾಕೆ ಕ್ರಮಕೈಗೊಳ್ಳಲಾಗಲಿಲ್ಲ ಇದಕ್ಕೆ ಕುಮ್ಮಕ್ಕು ನೀಡಿದ್ದಾರೆಯೇ ಎಂಬ ಸಂಶಯ ಮೂಡುತ್ತದೆ.
ಹಳೇ ವಿದ್ಯಾರ್ಥಿಗಳ ಸಂಘ ನಮ್ಮ ಸಂಸ್ಥೆಯ ವಿರುದ್ದ ಮದ್ಯಪಾನ, ದೂಮಪಾನ, ಮಾಧಕದ್ರವ್ಯ ಸೇವನೆ, ಲೈಂಗಿಕ ಕಿರುಕುಳ ಮತ್ತು ಭ್ರಷ್ಠಾಚಾರ ಆರೋಪವನ್ನು ಮಾಡಿರುವುದು ಸಮಂಜಸವಲ್ಲ. ಇದರಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಭಯಭೀತರಾಗಿದ್ದು, ಅವರ ಮಾನಸಿಕ ಮತ್ತು ಭೌದಿಕ ಕ್ಷಮತೆಯ ಮೇಲೆ ದುಷ್ಪರಿಣಾಮ ಉಂಟಾಗಿದೆ. ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿದ್ದು, ಪೋಷಕರು ಕಂಗಾಲಾಗಿದ್ದಾರೆ. ಮತ್ತು ಸಂಸ್ಥೆಯ ಉನ್ನತಿಗೆ ಧಕ್ಕೆ ಉಂಟಾಗಿದೆ. ನಾನು ೧೧-ಮೇ-೨೦೨೩ರಂದು ಅಧಿಕಾರ ವಹಿಸಿಕೊಂಡಿದ್ದು, ಇದುವರೆಗೂ ಯಾವುದೇ ಅಹಿತಕರ ಘಟನೆಗಳು ಇಲ್ಲಿ ನಡೆದಿರುವುದಿಲ್ಲ.