
ಮಾನವಿ.ಜ.೧೩-ಡಿಸೆಂಬರ್ ೧೦ ರಂದು ಬೆಂಗಳೂರು ನಗರದ ಎಸ್ಐಓ ರಾಜ್ಯ ಸಲಹಾ ಸಮಿತಿಯ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ರಮೀಸ್ ಸಿ.ಕೆ ಇವರ ಆದೇಶದಂತೆ ಮಾನವಿ ನಗರದ ಸಾಮಾಜಿಕ ಹೋರಾಟಗಾರ ಜೀಶಾನ್ ಆಖಿಲ್ ಸಿದ್ದಕಿ ೨೦೨೩-೨೪ ಸಾಲಿನ ನೂತನ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
೧೯೮೨ ರಲ್ಲಿ ಆರಂಭವಾದ ಈ ಸಂಘಟನೆಯೂ ದೇಶದಾದ್ಯಂತ ವಿದ್ಯಾರ್ಥಿ ಸಮುದಾಯಕ್ಕೆ ಧ್ವನಿಯಾಗಿ ನೈತಿಕ ಮೌಲ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂವಿಧಾನ ಬದ್ದವಾಗಿ ಕೆಲಸ ಮಾಡುತ್ತಿದೆ ಮುಂದಿನ ದಿನಗಳಲ್ಲಿ ನಾನು ವಿದ್ಯಾರ್ಥಿ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದರು.